ಚಿತ್ರಮಂದಿರದ ಬಳಿಕ ಈ ಒಟಿಟಿ ವೇದಿಕೆಯಲ್ಲೂ ‘ಬೆಲ್ ​ಬಾಟಂ’ ಚಿತ್ರ ಕಣ್ತುಂಬಿಕೊಳ್ಳಬಹುದು!

Akshay
Published on

ಮುಂಬೈ: ಲಾಕ್​ಡೌನ್​ ಮುಗಿದು, ಚಿತ್ರೀಕರಣ ಮಾಡುವುದಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಅಕ್ಷಯ್​ ಕುಮಾರ್​ ದೂರದ ಸ್ಕಾಟ್​ಲ್ಯಾಂಡ್​ಗೆ ಹೋಗಿ ಸದ್ದಿಲ್ಲದೆ ‘ಬೆಲ್​ ಬಾಟಂ’ ಚಿತ್ರದ ಚಿತ್ರೀಕರಣವನ್ನು ಮುಗಿಸಿ ಬಂದಿದ್ದರು. ಅಷ್ಟೇ ಅಲ್ಲ, ಚಿತ್ರದ ಬಿಡುಗಡೆಯ ದಿನಾಂಕವನ್ನು ಸಹ ಘೋಷಿಸಿದ್ದರು. ಎಲ್ಲ ಅಂದುಕೊಂಡಂತೆ ಆಗಿದ್ದರೆ. ಏ.02ರಂದು ಸಿನಿಮಾ ಬಿಡುಗಡೆ ಆಗಬೇಕಿತ್ತು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಅದು ಸಾಧ್ಯವಾಗಲಿಲ್ಲ. ಇತ್ತೀಚೆಗಷ್ಟೇ ಹೊಸ ಬಿಡುಗಡೆ ದಿನಾಂಕ ಘೋಷಣೆ ಸಹ ಮಾಡಿದ್ದ ತಂಡ ಜು. 27ಕ್ಕೆ ಚಿತ್ರವನ್ನು ತೆರೆಗೆ ತರುತ್ತಿದೆ.

ಇನ್ನು ಚಿತ್ರಮಂದಿರಗಳಲ್ಲಿ ತೆರೆಕಂಡ ಕೆಲವೇ ದಿನಗಳಿಗೆ ಸಾಕಷ್ಟು ಸಿನಿಮಾಗಳು ಒಟಿಟಿಯಲ್ಲಿ ರಿಲೀಸ್ ಆಗಿವೆ. ಅದೇ ರೀತಿ ಜು. 27ಕ್ಕೆ ಚಿತ್ರಮಂದಿರದಲ್ಲಿ ತೆರೆಕಾಣುವ ಬೆಲ್ ಬಾಟಂ ಚಿತ್ರ, ಅಲ್ಲಿಂದ ಕೇವಲ ಎರಡು ವಾರದ ಬಳಿಕ ಒಟಿಟಿಗೆ ಲಗ್ಗೆ ಇಡಲಿದೆ. ಚಿತ್ರಮಂದಿರದ ಜತೆಗೆ ಅಮೆಜಾನ್ ಪ್ರೈಂನಲ್ಲಿಯೂ ಸಿನಿಮಾ ಸ್ಟ್ರೀಮ್ ಆಗಲಿದೆ. ಅಂದರೆ, ಆ. 10 ಅಥವಾ 14ರಂದು ಚಿತ್ರ ಪ್ರಸಾರವನ್ನು ಆರಂಭಿಸಲಿದೆಯಂತೆ.

‘ಬೆಲ್​ ಬಾಟಮ್​’ ಚಿತ್ರವನ್ನು ರಂಜಿತ್​ ತಿವಾರಿ ನಿರ್ದೇಶಿಸಿದ್ದು, ಪೂಜಾ ಎಂಟರ್​ಟೈನ್​ಮೆಂಟ್​ ಸಂಸ್ಥೆಯಡಿ ವಶು ಭಾಗ್ನಾನಿ ಮತ್ತು ಜಾಕಿ ಭಾಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್​ ಕಥೆಯಾಗಿದ್ದು ಅಕ್ಷಯ್​ ಕುಮಾರ್ ಜತೆಗೆ ವಾಣಿ ಕಪೂರ್​, ಲಾರಾ ದತ್ತ, ಹುಮಾ ಖುರೇಷಿ ಸೇರಿ ಹಲವರು ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net