ಆರ್​ಜಿವಿ ಜತೆ ಸೆಕ್ಸ್​ ಟಾಕ್​: ಅರಿಯಾನಾ ನಾ ನಿನ್ನ ಬಿಡುವುದಿಲ್ಲ ಎಂದ ಸಿಕ್ರೆಟ್​ ರೂಮ್​ ಫ್ರೆಂಡ್​!

Ariyana
Published on

ಹೈದರಾಬಾದ್​: ಬಾಲಿವುಡ್​ ನಿರ್ದೇಶಕ ರಾಮ್​​ಗೋಪಾಲ್​ ವರ್ಮ ಜತೆ ಬಿಗ್​ಬಾಸ್​ ಬ್ಯೂಟಿ ಅರಿಯಾನಾ ಗ್ಲೋರಿ, ದೇಹದ ಅಂಗಾಂಗ, ಸೆಕ್ಸ್​, ರೊಮ್ಯಾನ್ಸ್​, ಸಂಬಂಧ (ಅಫೇರ್​) ಮುಂತಾದ ವಿಚಾರಗಳ ಬಗ್ಗೆ ಮುಕ್ತಾವಾಗಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಅಲ್ಲದೆ, ಟ್ರೋಲಿಗರಿಗೆ ಆರ್​​ಜಿವಿ ಮತ್ತು ಅರಿಯಾನಾ ಹಾಟ್​ ಸಂದರ್ಶನವು ಆಹಾರವಾಗಿದೆ. ಇದರ ನುಡವೆ ಅರಿಯಾನಾ ಜತೆ ಬಿಗ್​ಬಾಸ್​ನಲ್ಲಿ​ ಭಾಗಿಯಾಗಿದ್ದ ಸೈಯದ್​ ಸೊಹೆಲ್​​, ಕೊಲೆ ಮಾಡುವುದಾಗಿ ಎಚ್ಚರಿಕೆ ನೀಡಿರುವುದು ಎಲ್ಲರ ಹುಬ್ಬೇರಿಸಿದೆ.

ಅರಿಯಾನಾ ಮತ್ತು ಸೊಹೆಲ್​​ ತೆಲುಗು ಬಿಗ್​ಬಾಸ್​ ಸೀಸನ್​ 4 ಸ್ಪರ್ಧಿಯಾಗಿದ್ದರು. ಬಿಗ್​ಬಾಸ್​ನಲ್ಲೂ ಇಬ್ಬರು ಒಳ್ಳೆಯ ಫ್ರೆಂಡ್ಸ್​ ಆಗಿದ್ದರು. ಅಲ್ಲದೆ, ಇಬ್ಬರನ್ನು ಒಟ್ಟಿಗೆ ರಹಸ್ಯ ಕೋಣೆಗೆ ಶೋ ವೇಳೆ ಕಳುಹಿಸಲಾಗಿತ್ತು. ಹೀಗಾಗಿ ಇಬ್ಬರ ನಡುವೆ ಸ್ನೇಹವಿದ್ದು, ಅದು ಹಾಗೇ ಮುಂದುವರಿದಿದೆ. ಇಬ್ಬರು ಭೇಟಿಯಾಗುವುದು ಸಹ ಸಾಮಾನ್ಯವಾಗಿದೆ.

ಸೊಹೆಲ್​ ಇತ್ತೀಚೆಗೆ ಅರಿಯಾನಾ ಮನೆಗೆ ಹೋಗಿ ಬಂದಿದ್ದಾರೆ. ಈ ವೇಳೆ ಅರಿಯಾನಾ ಫೇವರಿಟ್​ ಚಿಂಟು ಗೊಂಬೆ (ಬಿಗ್​ಬಾಸ್​ ಸ್ಮರಣಾರ್ತ ಅಲ್ಲಿಂದ ತಂದಿರುವ ಗೊಂಬೆ) ತೆಗೆದುಕೊಂಡು ಬಂದಿದ್ದಾರೆ. ಗೊಂಬೆಯ ಜತೆಗೆ ವಿಡಿಯೋವೊಂದನ್ನು ಶೇರ್​ ಮಾಡಿರುವ ಸೊಹೆಲ್​ ಅದರಲ್ಲಿ, ಮೊದಲನೇ ಬಾರಿ ಒಬ್ಬರ ವಿರುದ್ಧ ಸೇಡು ತೀರಿಸಿಕೊಳ್ಳಬೇಕೆನಿಸಿದೆ. ಅವರು ನನ್ನ ಸಹಜ ಶತ್ರು. ಬಿಗ್​ಬಾಸ್​ ಜರ್ನಿ ಯಶಸ್ವಿಯಾಗಿತ್ತು. ಈಗಲೂ ನನಗೊಬ್ಬ ಶತ್ರು ಇದ್ದಾರೆ. ಅವರನ್ನು ಇನ್ನು ಮುಂದೆ ಬಿಡುವುದಿಲ್ಲ ಎನ್ನುತ್ತಾ ಅರಿಯಾನ ನಾನು ನಿನ್ನು ಕೊಲ್ಲುತ್ತೇನೆಂದು ತಮಾಷೆ ಮಾಡಿದ್ದಾರೆ.

ಆದರೆ, ನೆಟ್ಟಿಗರು ಸೊಹೆಲ್​ ವಿಡಿಯೋವನ್ನು ಆರ್​ಜಿವಿ ಸಂದರ್ಶನಕ್ಕೆ ತಳುಕು ಹಾಕಿ ಸೊಹೆಲ್​ ಕಾಲು ಎಳೆಯುತ್ತಿದ್ದಾರೆ. ಅರಿಯಾನಾ ಬೋಲ್ಡ್​ ಆಗಿ ಮಾತನಾಡಿದ್ದಕ್ಕೆ ಸೊಹೆಲ್​ ಹೊಟ್ಟೆಗೆ ಬೆಂಕಿ ಇಟ್ಟಂತಗಾಗಿದೆ. ಹೀಗಾಗಿ ಅರಿಯಾನಾರನ್ನು ಕೊಲೆ ಮಾಡುತ್ತೇನೆ ಎನ್ನುತ್ತಿದ್ದಾರೆ. ಅರಿಯಾನಾ ಅಪ್ಪಿತಪ್ಪಿ ಸೊಹೆಲ್​ ಕೈಗೆ ಸಿಗಬೇಡಿ. ನಿಮ್ಮಿಂದ ಮತ್ತಷ್ಟು ಮನರಂಜನೆಯನ್ನು ನಾವು ಎದುರು ನೋಡುತ್ತಿದ್ದೇವೆ. ಸೊಹೆಲ್​ ನಿಮ್ಮ ಕೋಪ ಕಡಿಮೆ ಮಾಡಿಕೊಳ್ಳಿ ಎಂದು ನೆಟ್ಟಿಗರು ವಿಡಿಯೋ ಕಾಮೆಂಟ್​ ಮಾಡಿದ್ದಾರೆ.

ಅಂದಹಾಗೆ ಆರ್​ಜಿವಿ ಮತ್ತು ಅರಿಯಾನಾ ಜಿಮ್​ ಮಾಡುತ್ತಾ ಒಬ್ಬರಿಗೊಬ್ಬರು ಬೋಲ್ಡ್​ ಮಾತುಗಳನ್ನಾಡಿರುವ ಸಂದರ್ಶನದ ವಿಡಿಯೋ ಯೂಟ್ಯೂಬ್​ನಲ್ಲಿ ವೈರಲ್​ ಆಗಿದೆ. ಇಡೀ ಸಂದರ್ಶನದಲ್ಲಿ ದೇಹದ ಅಂಗಾಂಗ, ಸೆಕ್ಸ್​, ರೊಮ್ಯಾನ್ಸ್​, ಸಂಬಂಧ (ಅಫೇರ್​) ಮುಂತಾದ ವಿಚಾರಗಳ ಬಗ್ಗೆಯೇ ಇಬ್ಬರು ಮುಕ್ತವಾಗಿ ಚರ್ಚಿಸಿದ್ದಾರೆ. ಅಂದಹಾಗೆ ಈ ಸಂದರ್ಶನ ವರ್ಮ ಅವರು ಆಫೀಸ್​ನಲ್ಲೇ ನಡೆದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net