ಅಯೋಧ್ಯೆಗೆ ಹಾರಲಿದ್ದಾರೆ ಅಕ್ಷಯ್​! ರಾಮಸೇತು ಬಗ್ಗೆ ಅಧ್ಯಯನಕ್ಕೆ ಮುಂದಾದ ಹೀರೋ

ramsetu
Published on

ಮುಂಬೈ: ಬಾಲಿವುಡ್​ನ ಪ್ರಸಿದ್ಧ ನಟ ಅಕ್ಷಯ್​ ಕುಮಾರ್​ ಮಾರ್ಚ್​ 18ರಂದು ಅಯೋಧ್ಯೆಗೆ ತೆರಳಲಿದ್ದಾರೆ. ರಾಮ್​ಸೇತು ಸಿನಿಮಾ ಮುಹೂರ್ತಕ್ಕಾಗಿ ಅಲ್ಲಿಗೆ ತೆರಳುತ್ತಿರುವುದಾಗಿ ತಿಳಿಸಲಾಗಿದೆ.

ಕುಟುಂಬದೊಂದಿಗೆ ಮಾಲ್ಡೀವ್ಸ್​ ಪ್ರವಾಸ ಮುಗಿಸಿ ಇದೀಗ ಮುಂಬೈಗೆ ವಾಪಾಸಾಗಿರುವ ಅಕ್ಷಯ್​ ಕುಮಾರ್​ ಅಯೊಧ್ಯೆಯಲ್ಲಿ ರಾಮ್​ ಸೇತು ಸಿನಿಮಾದ ಮುಹೂರ್ತ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇವರಿಗೆ ನಿರ್ಮಾಪಕ ಚಂದ್ರಪ್ರಕಾಶ್ ದ್ವಿವೇದಿ ಮತ್ತು ನಿರ್ದೇಶಕ ಅಭಿಷೇಕ್ ಶರ್ಮಾ ಸಾಥ್​ ಕೊಡಲಿದ್ದಾರೆ.

ರಾಮ್​ ಸೇತು ಸಿನಿಮಾದಲ್ಲಿ ಅಕ್ಷಯ್​ ಪುರಾತತ್ವಶಾಸ್ತ್ರಜ್ಞನಾಗಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಮತ್ತು ವಿದೇಶಗಳ ಪ್ರಸಿದ್ಧ ಪುರಾತತ್ವಶಾಸ್ತ್ರಜ್ಞನರಿಂದ ಸ್ಫೂರ್ತಿ ಪಡೆದು ಈ ಪಾತ್ರವನ್ನು ಹೆಣೆದಿರುವುದಾಗಿ ಅಭಿಷೇಕ್ ಶರ್ಮಾ ತಿಳಿಸಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್​ ಅವತಾರ ಬೇರೆ ಎಲ್ಲ ಸಿನಿಮಾಗಳಿಗಿಂತ ವಿಭಿನ್ನವಾಗಿರಲಿದೆ. ಸಿನಿಮಾದ ಬಹುತೇಕ ಚಿತ್ರೀಕರಣ ಮುಂಬೈನಲ್ಲೇ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.

2020ರ ದೀಪಾವಳಿ ಹಬ್ಬದಂದು ಅಕ್ಷಯ್​ ಕುಮಾರ್​ ರಾಮ್​ ಸೇತು ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆ ಮಾಡಿದ್ದರು. ರಾಮನ ಬ್ಯಾಕ್​ಗ್ರೌಂಡ್​ ಇದ್ದು, ಮುಂದಿರುವ ಅಕ್ಷಯ್​ ಕುತ್ತಿಗೆಗೆ ಕೇಸರಿ ಶಾಲು ಧರಿಸಿದ್ದು, ಸಿನಿ ಪ್ರಿಯರ ಮನಸ್ಸು ಗೆದ್ದಿತ್ತು. (ಏಜೆನ್ಸೀಸ್​)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net