More

    VIDEO| ಹಾವಿನ ಜತೆ ಆಟವಾಡಲು ಹೋದವನಿಗೆ ಹಾವು ಹೇಗೆ ಬುದ್ಧಿ ಕಲಿಸಿತು ನೀವೇ ನೋಡಿ..

    ಫ್ಲೋರಿಡಾ: ಹಾವು ಎಂದರೆ ನೂರಡಿ ದೂರ ಹಾರುವವರು ಇದ್ದಾರೆ. ಆದರೆ ಕೆಲವರು ಹೇಗಿರುತ್ತಾರೆ ಎಂದರೆ ಅದೇ ಹಾವಿನ ಜತೆ ಆಟವಾಡಲು ಬಯಸುತ್ತಾರೆ. ಅದೇ ರೀತಿ ಹಾವಿನೊಂದಿಗೆ ಆಟವಾಡಲು ಹೋದ ಯೂಟ್ಯೂಬ್​ ಕಂಟೆಂಟ್​ ಕ್ರಿಯೇಟರ್​ ಕಥೆ ಏನಾಗಿದೆ ನೀವೇ ನೋಡಿ..

    ಅಮೆರಿಕದ 32 ವರ್ಷದ ನಿಕ್ ಬಿಷಪ್ ಯೂಟ್ಯೂಬ್​ ಚಾನೆಲ್​ ಒಂದನ್ನು ನಡೆಸುತ್ತಿದ್ದಾರೆ. ವೈಲ್ಡ್​ ಲೈಫ್​ ಬಗ್ಗೆ ವಿಡಿಯೋಗಳನ್ನು ಮಾಡಿ ಹರಿಬಿಡುತ್ತಿದ್ದಾನೆ. ಇತ್ತೀಚೆಗೆ ಆತ ಫ್ಲೋರಿಡಾದ ಎವರ್ಗ್ಲೇಡ್ಸ್ ರಾಷ್ಟ್ರೀಯ ಉದ್ಯಾನದಲ್ಲಿ ಹಾವೊಂದರ ಬಗ್ಗೆ ವಿಡಿಯೋ ಮಾಡಿದ್ದಾನೆ. ಸುಮಾರು ಮೂರು ಅಡಿ ಉದ್ದವಿರುವ ವಿಷರಹಿತ ಹಾವನ್ನು ಹಿಡಿದು ಅದರ ಬಗ್ಗೆ ವಿಶ್ಲೇಷಣೆ ನೀಡಿದ್ದಾನೆ.

    ವಿಡಿಯೋ ಮಾಡುವ ವೇಳೆ ಹಾವು ಆತನ ಕೈನಿಂದ ತಪ್ಪಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡಿದೆ. ಕಚ್ಚಲು ಪ್ರಯತ್ನಿಸಿದೆ. ಕೊನೆಗೆ ಎಗರಿ, ನಿಕ್ ಬಿಷಪ್​ನ ಕಣ್ಣಿಗೆ ಕಚ್ಚಿಬಿಟ್ಟಿದೆ. ಅದಾದ ತಕ್ಷಣ ನಿಕ್​ ಹಾವನ್ನು ಬಿಟ್ಟು ತನ್ನ ಕಣ್ಣನ್ನು ಹಿಡಿದುಕೊಂಡಿದ್ದಾನೆ. ಹಾವು ಕಚ್ಚಬಹುದು ಎಂದುಕೊಂಡಿದ್ದೆ ಆದರೆ ನನ್ನ ಕಣ್ಣನ್ನೇ ಕಚ್ಚಿಬಿಡಬಹುದು ಎಂದು ನಾನಂದುಕೊಂಡಿರಲಿಲ್ಲ. ಅದೃಷ್ಟವಶಾತ್​ ಅದು ನನ್ನ ರೆಪ್ಪೆಗೆ ಕಚ್ಚಿದೆ, ಇಲ್ಲವಾದರೆ ನಾನು ನನ್ನ ಕಣ್ಣ ಕಳೆದುಕೊಳ್ಳಬೇಕಾಗುತ್ತಿತ್ತು ಎಂದು ಆತ ನಂತರ ತಿಳಿಸಿದ್ದಾನೆ. ಈ ವಿಡಿಯೋ ಇದೀಗ ಸಕತ್​ ವೈರಲ್​ ಆಗಿದೆ. (ಏಜೆನ್ಸೀಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಬ್ಯಾಂಕ್​ ಮುಷ್ಕರ: ಕೇಂದ್ರ ಸರ್ಕಾರಕ್ಕೆ ಸಾರ್ವಜನಿಕ ವಲಯದ ಬ್ಯಾಂಕುಗಳು ಕೊಟ್ಟ ಎಚ್ಚರಿಕೆ ಎಂತದು?

    ಹಾಬಿಯೇ ಜಾಬ್!; ಮನೆಯಲ್ಲಿದ್ದುಕೊಂಡೇ ಗಳಿಸಲು ಮಹಿಳೆಯರಿಗೆ ಅವಕಾಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts