

ಲಾಕ್ಡೌನ್ನಿಂದ ಕಳೆದ ನಾಲ್ಕು ತಿಂಗಳುಗಳಿಂದ ಮನೆಯಲ್ಲೇ ಇದ್ದ ಅಕ್ಷಯ್ ಕುಮಾರ್, ಅಂತೂ ಶೂಟಿಂಗ್ಗೆ ಹೊರಟಿದ್ದಾರೆ. ಇಂದು ತಮ್ಮ ಕುಟುಂಬದವರು ಮತ್ತು ಚಿತ್ರತಂಡದವರ ಜತೆಗೆ ಅವರು ಚಾರ್ಟರ್ಡ್ ಫ್ಲೈಟ್ನಲ್ಲಿ ಯೂಕೆಗೆ ಪ್ರಯಾಣ ಬೆಳೆಸಿದ್ದಾರೆ.
ಇದನ್ನೂ ಓದಿ: ಹೊಸ ದಾಖಲೆ ಬರೆದ ಮಮ್ಮೂಟ್ಟಿ … ಏನ್ ಗೊತ್ತಾ ಅದು?
ಪ್ರತೀ ವರ್ಷ ಅಕ್ಷಯ್ ಕುಮಾರ್ ಅಭಿನಯದ ಮೂರ್ನಾಲ್ಕು ಚಿತ್ರಗಳಾದರೂ ಬಿಡುಗಡೆಯಾಗುತ್ತವೆ/ ಆ ಮಟ್ಟಿಗೆ ಅವರು ಬಿಜಿ ಇರುತ್ತಾರೆ. ಆದರೆ, ಈ ವರ್ಷ ಮಾತ್ರ ಲಾಕ್ಡೌನ್ನಿಂದಾಗಿ ಅಕ್ಷಯ್ ಕುಮಾರ್ ಮನೆಯಲ್ಲೇ ಕೂರುವಂತಾಯಿತು. ಶೂಟಿಂಗ್ಗೆ ಎಷ್ಟು ಹೊತ್ತಿಗೆ ಹೊರಟೇನೋ ಎಂದು ತುದಿಗಾಲಲ್ಲಿ ಕೂತಿದ್ದ ಅಕ್ಷಯ್, ಕೊನೆಗೂ ಇಂದು 'ಬೆಲ್ ಬಾಟಮ್' ಚಿತ್ರದ ಚಿತ್ರೀಕರಣಕ್ಕೆಂದು ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಿದ್ದಾರೆ.
ಈ ಬಾರಿ ಅವರು ಇಡೀ ಚಿತ್ರದ ಚಿತ್ರೀಕರಣವನ್ನು ಅಲ್ಲೇ ಮುಗಿಸಿಕೊಂಡು ಬರುವುದಕ್ಕೆ ಯೋಚಿಸುತ್ತಿದ್ದಾರೆ. ಹಾಗೆ ಮಾಡಿದರೆ, ಇನ್ನೆರೆಡು ತಿಂಗಳಾದರೂ ಅವರು ಅಲ್ಲಿರಬೇಕಾಗುತ್ತದೆ. ಮನೆಯವರನ್ನು ಅಷ್ಟೊಂದು ದಿನಗಳ ಕಾಲ ಬಿಟ್ಟಿರುವುದು ಕಷ್ಟ ಎಂದು ಅರ್ಥ ಮಾಡಿಕೊಂಡಿರುವ ಅಕ್ಷಯ್, ಹೆಂಡತಿ ಟ್ವಿಂಕಲ್, ಮಗ ಆರವ್ ಮತ್ತು ಮಗಳು ನಿತಾರಾಳನ್ನು ಕರೆದುಕೊಂಡು ಹೊರಟಿದ್ದಾರೆ.
ಇನ್ನು ಅಕ್ಷಯ್ ಫ್ಯಾಮಿಲಿ ಜತೆಗೆ ಲಾರಾ ದತ್ತ, ಮಹೇಶ್ ಭೂಪತಿ, ನಿರ್ಮಾಪಕ ಜಾಕಿ ಬಾಗ್ನಾನಿ, ಹ್ಯೂಮಾ ಖುರೇಷಿ, ನಿರ್ದೇಶಕ ರಂಜಿತ್ ತಿವಾರಿ ಮುಂತಾದವರು ಪ್ರಯಾಣ ಬೆಳೆಸಿದ್ದಾರೆ. ಇವರೆಲ್ಲಾ ಇಂದು ಮಧ್ಯಾಹ್ನ ಮುಂಬೈನ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದು, ವಿಶೇಷ ವಿಮಾನದ ಮೂಲಕ ಇಂಗ್ಲೆಂಡ್ಗೆ ಹಾರಲಿದ್ದಾರೆ.
'ಬೆಲೆ ಬಾಟಮ್' ಚಿತ್ರವು 80ರ ದಶಕದ ಕಥೆ ಹೊಂದಿದ್ದು, ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ಗೆ ನಾಯಕಿಯಾಗಿ ವಾಣಿ ಕಪೂರ್ ನಟಿಸುತ್ತಿದ್ದಾರೆ. ಜತೆಗೆ ಲಾರಾ ದತ್ತ ಮತ್ತು ಹ್ಯೂಮಾ ಖುರೇಷಿ ಸಹ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.