ವಿದೇಶಿ ಚಿತ್ರಮಂದಿರಗಳಲ್ಲಿ ‘ಬಾಂಬ್​’ ಸಿಡಿಸಲಿದ್ದಾರೆ ಅಕ್ಷಯ್​ ಕುಮಾರ್​!

Akshay
Published on

ಮುಂಬೈ: ಕರೊನಾ ಲಾಕ್​ಡೌನ್​ ಬಳಿಕ ಬಾಲಿವುಡ್​ನ ಮೊದಲ ಸಿನಿಮಾವೊಂದು ಚಿತ್ರಮಂದಿರದಲ್ಲಿ ಬಿಡುಗಡೆ ಆಗಲು ಸಿದ್ಧತೆ ಮಾಡಿಕೊಂಡಿದೆ. ಅಷ್ಟೇ ಅಲ್ಲ ರಿಲೀಸ್​ ದಿನಾಂಕವನ್ನೂ ಘೋಷಿಸಿಕೊಂಡಿದೆ. ಅದೇ ಲಕ್ಷ್ಮೀ ಬಾಂಬ್​!

ಬಾಲಿವುಡ್​ನ ಸ್ಟಾರ್ ನಟ ಅಕ್ಷಯ್​ ಕುಮಾರ್​ ನಟನೆಯ ಲಕ್ಷ್ಮೀ ಬಾಂಬ್​ ಸಿನಿಮಾ ಸದ್ಯ ಯಾರೂ ಮಾಡದ ದಾಖಲೆಯನ್ನು ಬರೆಯಲು ಸಜ್ಜಾಗಿದೆ. ಕರೊನಾ ಹಾವಳಿ ನಡುವೆಯೂ ಚಿತ್ರಮಂದಿರದಲ್ಲಿಯೇ ಈ ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗಿದೆ.

ನವೆಂಬರ್​ 9ರಂದು ಡಿಸ್ನಿ ಹಾಟ್​ಸ್ಟಾರ್​ ಓಟಿಟಿ ವೇದಿಕೆಯಲ್ಲಿ ಲಕ್ಷ್ಮೀ ಬಾಂಬ್​ ಸಿನಿಮಾ ಬಿಡುಗಡೆಯಾಗುತ್ತಿದ್ದು, ಇದರ ಜತೆಗೆ ಆಸ್ಟ್ರೇಲಿಯಾ, ನ್ಯೂಜಿಲೆಂಡ್​ ಮತ್ತು ಅರಬ್​ ರಾಷ್ಟ್ರಗಳಲ್ಲಿನ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ಆವತ್ತೇ ಈ ಚಿತ್ರ ತೆರೆಕಾಣಲಿದೆ.

ರಾಘವ್​ ಲಾರೆನ್ಸ್ ಈ ಸಿನಿಮಾ ನಿರ್ದೇಶನ ಮಾಡಿದ್ದು, ಅಕ್ಷಯ್​ ಕುಮಾರ್ ಅವರ ಹೋಮ್​ ಬ್ಯಾನರ್​ ಕೇಪ್​ ಆಫ್​ ಗುಡ್ ಫಿಲಂಸ್​​ ಅಡಿಯಲ್ಲಿ ಚಿತ್ರ ನಿರ್ಮಾಣವಾಗಿದೆ. ತುಷಾರ್​ ಎಂಟರ್​ಟೈನ್​ಮೆಂಟ್ಸ್​ ಮತ್ತು ಶಬೀನಾ ಎಂಟರ್ಟೈನ್​ಮೆಂಟ್​ ನಿರ್ಮಾಣದಲ್ಲಿ ಪಾಲುದಾರಿಕೆ ಹೊಂದಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net