ಅಯೋಧ್ಯೆಯಲ್ಲಿ ‘ರಾಮ್​ ಸೇತು’ ಶೂಟಿಂಗ್​ ವಿಚಾರ: ಅಕ್ಷಯ್​ ಬೇಡಿಕೆಗೆ ಸಿಎಂ ಆದಿತ್ಯನಾಥ ಏನಂದ್ರು?

Akshaysd
Published on

ಮುಂಬೈ: ಈಗಾಗಲೇ ಬಾಲಿವುಡ್ ನಟ ಅಕ್ಷಯ್​ ಕುಮಾರ್​ ದೀಪಾವಳಿ ಹಬ್ಬದ ನಿಮಿತ್ತ ರಾಮ್​ಸೇತು ಸಿನಿಮಾ ಘೋಷಣೆ ಮಾಡಿಕೊಂಡಿದ್ದರು. ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟರ್​ ಬಿಡುಗಡೆ ಮಾಡಿಕೊಂಡು, ಒಂದಷ್ಟು ಪರ ವಿರೋಧ ಚರ್ಚೆಗೂ ಕಾರಣರಾಗಿದ್ದರು. ಇದೀಗ ಇದೇ ಸಿನಿಮಾದ ಶೂಟಿಂಗ್​ ಬಗ್ಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರನ್ನು ಭೇಟಿಯಾಗಿದ್ದಾರೆ ಅಕ್ಷಯ್​ ಕುಮಾರ್​.

ಇತ್ತೀಚೆಗಷ್ಟೇ ಸಿಎಂ ಯೋಗಿ ಆದಿತ್ಯನಾಥ್​, ಉತ್ತರ ಪ್ರದೇಶದ ಗೌತಮ್​ಬುದ್ಧ ನಗರದಲ್ಲಿ ದೇಶದ ಅತೀ ದೊಡ್ಡ ಫಿಲಂ ಸಿಟಿ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ಮುಂಬೈಗೆ ಭೇಟಿ ನೀಡಿದ್ದರು. ಈ ವೇಳೆ ಅಕ್ಷಯ್​ ಕುಮಾರ್​, ಅಯೋಧ್ಯೆಯಲ್ಲಿ ಚಿತ್ರೀಕರಣ ಮಾಡಲು ಅನುಮತಿ ಕೋರಿದ್ದಾರೆ.

ರಾಮ್​ಸೇತು ಸಿನಿಮಾ ಕುರಿತು ಅಯೋಧ್ಯೆಯ ನೈಜ ಸ್ಥಳಗಳಲ್ಲಿಯೇ ಶೂಟಿಂಗ್​ ಮಾಡಿಕೊಳ್ಳಬೇಕೆಂಬುದು ಚಿತ್ರತಂಡದ ಪ್ಲ್ಯಾನ್​. ಹಾಗಾಗಿ ಅದರ ಚರ್ಚೆ ಸಲುವಾಗಿಯೇ ಆದಿತ್ಯನಾಥ್​ ಅವರನ್ನು ಭೇಟಿಯಾಗಿ ಅವರಿಂದ ಸಮ್ಮತಿಯನ್ನೂ ಪಡೆದುಕೊಂಡಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ, 2021ರ ಮಧ್ಯೆದಲ್ಲಿ ಸಿನಿಮಾ ಶೂಟಿಂಗ್​ ಶುರುವಾಗಲಿದೆ.

ಅಭಿಷೇಕ್​ ಶರ್ಮಾ ನಿರ್ದೇಶನದಲ್ಲಿ ಈ ಚಿತ್ರ ಸಿದ್ಧವಾಗಲಿದ್ದು, ಸದ್ಯ ಪೃಥ್ವಿರಾಜ್​ ಮತ್ತು ಬಚ್ಚನ್ ಪಾಂಡೆ ಸಿನಿಮಾ ಕೆಲಸಗಳಲ್ಲಿಯೂ ಅಕ್ಷಯ್​ ತೊಡಗಿಸಿಕೊಂಡಿದ್ದಾರೆ. ಇದಾದ ಬಳಿಕ ರಕ್ಷಾ ಬಂಧನ್ ಶುರುವಾಗಲಿದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net