ವಿಜಯ್‌ಗೆ ಫೋನ್ ಮಾಡಿದ್ರಂತೆ ಅಜಿತ್! ... ಕಾರಣ ಏನು ಗೊತ್ತಾ?

Ajith - Vijay
Published on

ಕಾಲಿವುಡ್‌ನಲ್ಲಿ ವಿಜಯ್ ಮತ್ತು ಅಜಿತ್ ಅವರನ್ನು ಎದುರಾಳಿಗಳು ಎಂದೇ ಬಿಂಬಿಸಲಾಗುತ್ತದೆ. ಅವರಿಬ್ಬರಲ್ಲಿ ಯಾರು ಗ್ರೇಟ್ ಎಂಬ ವಿಷಯದಲ್ಲಿ ಇಬ್ಬರ ಅಭಿಮಾನಿಗಳು ಜಗಳವಾಡುತ್ತಲೇ ಇರುತ್ತಾರೆ. ಆದರೆ, ವಿಜಯ್ ಮತ್ತು ಅಜಿತ್ ಮಾತ್ರ ತೆರೆಯ ಹಿಂದೆ ಒಳ್ಳೆಯ ಸ್ನೇಹಿತರು. ಒಂದು ಕಾಲದಲ್ಲಿ ಜತೆಯಾಗಿ ನಟಿಸಿದವರು.

ಈಗ್ಯಾಕೆ ಈ ವಿಷಯ ಎಂದರೆ, ಇತ್ತೀಚೆಗೆ ವಿಜಯ್‌ಗೆ ಅಜಿತ್ ಫೋನ್ ಮಾಡಿ ಉಭಯಕುಶಲೋಪರಿ ನಡೆಸಿದರಂತೆ. ಜತೆಗೆ ಒಂದಿಷ್ಟು ಕಷ್ಟ-ಸುಖ ಮಾತಾಡಿದರಂತೆ. ಇಬ್ಬರೂ ಏನಾದರೂ ಬಹಳ ವರ್ಷಗಳ ನಂತರ ಜತೆಗೆ ಚಿತ್ರ ಮಾಡುವ ಸಾಧ್ಯತೆ ಇದೆಯಾ ಅಥವಾ ಅವರಿಬ್ಬರ ಅಭಿಮಾನಿಗಳೇನಾದರೂ ಮತ್ತೊಮ್ಮೆ ಕಚ್ಚಾಡಿಕೊಂಡಿದ್ದಾರಾ ಎಂಬ ಪ್ರಶ್ನೆ ಬರಬಹುದು.

ಹಾಗೇನಿಲ್ಲ. ವಿಜಯ್‌ಗೆ ಅಜಿತ್ ಫೋನ್ ಮಾಡಿದ್ದಿಕ್ಕೆ ಕಾರಣವಿದೆ. ಅದೇನೆಂದರೆ, ಲಾಕ್‌ಡೌನ್‌ನಿಂದ ವಿಜಯ್ ಮಗ ಸಂಜಯ್ ಕೆನಡಾದಲ್ಲಿ ಒಬ್ಬನೇ ಇದ್ದಾನೆ. ಮಗನನ್ನು ನೆನಪಿಸಿಕೊಂಡ ವಿಜಯ್, ಸಖತ್ ಟೆನ್ಶನ್ ಆಗಿದ್ದಾರೆ. ಈ ವಿಷಯ ಗೊತ್ತಾಗುತ್ತಿದ್ದಂತೆಯೇ ಫೋನ್ ಮಾಡಿ, ವಿಜಯ್‌ಗೆ ಸಮಾಧಾನ ಮಾಡಿದರಂತೆ ಅಜಿತ್. ತಮ್ಮ ಹಳೆಯ ಮಿತ್ರ, ಬಹಳ ದಿನಗಳ ನಂತರ ಫೋನ್ ಮಾಡಿ ವಿಚಾರಿಸಿದ್ದಿಕ್ಕೆ, ವಿಜಯ್‌ಗೆ ಸಹ ಬಹಳ ಖುಷಿಯಾಗಿದೆ. ಇದೇ ಖುಷಿಯಲ್ಲಿ ಅಜಿತ್ ಜತೆಗೆ ಹಲವು ನಿಮಿಷಗಳ ಕಾಲ ಬಾಯಿ ತುಂಬಾ ಮಾತಾಡಿದ್ದಾರೆ ವಿಜಯ್.

ಇನ್ನಾದರೂ ಕಾಲಿವುಡ್‌ನ ಈ ಇಬ್ಬರು ಜನಪ್ರಿಯ ಸ್ಟಾರ್‌ಗಳ ಅಭಿಮಾನಿಗಳು ಪರಸ್ಪರ ಕಚ್ಚಾಡುವುದನ್ನು ನಿಲ್ಲಿಸುತ್ತಾರಾ ಎಂಬುದನ್ನು ನೋಡಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net