ಅಜಯ್ ದೇವಗನ್ ಜನ್ಮದಿನಕ್ಕೆ ಭರ್ಜರಿ ಗಿಫ್ಟ್​ ಕೊಟ್ಟ RRR ಚಿತ್ರತಂಡ: ಮೋಷನ್ ಪೋಸ್ಟರ್ ಬಿಡುಗಡೆ

rrr ajay
Published on

ಹೈದರಾಬಾದ್: ಸಿನಿ ಪ್ರಿಯರಲ್ಲಿ ತೀವ್ರ ಕುತೂಹಲ ಮೂಡಿಸಿರುವ ಎಸ್ ಎಸ್ ರಾಜಮೌಳಿ ನಿರ್ದೇಶನದ ಆರ್​​ಆರ್​ಆರ್​ ಸಿನಿಮಾ ಇತ್ತೀಚೆಗೆ ಮೇಲಿಂದ ಮೇಲೆ ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡುತ್ತಿದೆ.

ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಬಾಲಿವುಡ್ ಸ್ಟಾರ್ ಅಜಯ್ ದೇವಗನ್ ನಟಿಸಿದ್ದಾರೆ. ಇವರ ಜನ್ಮ ದಿನ ಏಪ್ರೀಲ್ 3 ರಂದು. ಹೀಗಾಗಿ ಅಜಯ್ ಜನ್ಮದಿನಕ್ಕೆ ಒಂದು ದಿನ ಮುಂಚಿತವಾಗಿ ಆರ್​ಆರ್​ಆರ್ ಚಿತ್ರತಂಡ ಬಿಗ್ ಗಿಫ್ಟ್​ ಕೊಟ್ಟಿದೆ.

ಯುಟ್ಯೂಬ್​ನಲ್ಲಿ ಅಜಯ್​ ದೇವಗನ್ ಇರುವ ಮೋಷನ್ ಪೋಸ್ಟರ್​ನ್ನು ಚಿತ್ರತಂಡ ಇಂದು ಬಿಡುಗಡೆ ಮಾಡಿದೆ. ಅಜಯ್ ದೇವಗನ್ ಅವರ ಪಾತ್ರದ ಹೆಸರನ್ನು ರಿವಿಲ್ ಮಾಡಲಾಗಿಲ್ಲ. ಆದರೆ ಅಜಯ್ ದೇವಗನ್ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಸಕತ್ ಆಗಿ ಮಿಂಚಿದ್ದಾರೆ.

ಡಿವಿವಿ ಪ್ರೊಡಕ್ಸನ್​ನಲ್ಲಿ ಮೂಡಿಬರುತ್ತಿರುವ ಆರ್​ಆರ್​ಆರ್​ ಸಿನಿಮಾ ಒಂದು ಬ್ರಿಟೀಷ್ ಕಾಲದ ಐತಿಹಾಸಿಕ ಕಥಾ ಹಂದರವುಳ್ಳ ಸಿನಿಮಾವಾಗಿದೆ. ಸಿನಿಮಾದಲ್ಲಿ ರಾಮಚರಣ್ ತೇಜ್, ಜೂನಿಯರ್ ಎನ್​ಟಿಆರ್, ಅಜಯ್ ದೇವಗನ್, ಆಲಿಯಾ ಭಟ್ , ಓಲಿವಿಯಾ ಮೊರಿಸ್, ಆಲಿಸನ್ ದೂಡಿ ಸೇರಿದಂತೆ ಮುಂತಾದ ಖ್ಯಾತ ನಾಮ ನಟರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net