ಅಜಯ್-ಕಾಜೋಲ್ ಮದುವೆಯಾಗಿದ್ದು ಎಲ್ಲಿ ಗೊತ್ತಾ? ... 21 ವರ್ಷಗಳ ನಂತರ ಬಯಲಾಯ್ತು ರಹಸ್ಯ

Ajay - Kajol
Published on

ಅಜಯ್ ದೇವಗನ್ ಮತ್ತು ಕಾಜೋಲ್ ಮದುವೆಯಾಗಿ ಬರೋಬ್ಬರಿ 21 ವರ್ಷಗಳಾಗಿವೆ. 90ರ ದಶಕದ ಕೊನೆಯಲ್ಲಿ ಕೆಲವು ಚಿತ್ರಗಳಲ್ಲಿ ಜತೆಯಾಗಿ ನಟಿಸಿದ್ದ ಅಜಯ್-ಕಾಜೋಲ್ ನಡುವೆ ಪ್ರೇಮಾಂಕುರವಾಗಿತ್ತು. ಕ್ರಮೇಣ ಇಬ್ಬರೂ ಒಂದು ದಿನ ಮದುವೆಯಾದರು. ಆದರೆ, ಅವರಿಬ್ಬರು ಮದುವೆಯಾಗಿದ್ದು ಎಲ್ಲಿ, ಏನಾಯ್ತು ಎಂಬುದು ಯಾರಿಗೂ ಗೊತ್ತಿರಲಿಲ್ಲ. ಈಗ ಆ ರಹಸ್ಯ ಕೊನೆಗೂ ಬಯಲಾಗಿದೆ. ಬಯಲು ಮಾಡಿದ್ದು ಬೇರ‌್ಯಾರೂ ಅಲ್ಲ, ಖುದ್ದು ಅಜಯ್ ದೇವಗನ್.

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅಜಯ್, ತಮ್ಮ ಮದುವೆಯ ಬಗ್ಗೆ ನೆನಪಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮಮದುವೆ ಆಗಿದ್ದು ಮನೆಯ ಟೆರೇಸ್‌ನಲ್ಲಿ ಎಂಬ ಶಾಕಿಂಗ್ ನ್ಯೂಸ್ ಬಹಿರಂಗಪಡಿಸಿದ್ದಾರೆ.

‘ಇಲ್ಲಿ ಲವ್ ಪ್ರಪೋಸ್ ಅಂತೆಲ್ಲಾ ಇರಲಿಲ್ಲ. ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೆವು. ಕ್ರಮೇಣ ಇಬ್ಬರೂ ಹತ್ತಿರವಾದೆವು. ಅದೊಂದು ದಿನ ಇಬ್ಬರೂ ಮದುವೆಯಾಗುವುದಕ್ಕೆ ತೀರ್ಮಾನವೂ ಆಯಿತು. ನನಗೆ ಅದೊಂದು ದೊಡ್ಡ ಸುದ್ದಿ ಮಾಡುವುದಕ್ಕೆ ಸ್ವಲ್ಪವೂ ಇಷ್ಟವಿರಲಿಲ್ಲ. ಸೋ ನನ್ನ ರೂಮ್‌ನಲ್ಲಿದ್ದೆ. ಕಾಜೋಲ್ ಮತ್ತು ಅವರ ಮನೆಯವರು ಬಂದರು. ಸೀದಾ ಟೆರೇಸ್‌ಗೆ ಹೋದೆವು. ಅಲ್ಲಿ ಮದುವೆಯಾಯ್ತು. ನಾನು ವಾಪಸ್ಸು ಬೆಡ್‌ರೂಂ ಸೇರಿಕೊಂಡೆ’ ಎಂದು ಬಹಳ ಸಿಂಪಲ್ ಆಗಿ ಹೇಳುತ್ತಾರೆ ಅಜಯ್ ದೇವಗನ್.

ಒಬ್ಬ ಸೆಲೆಬ್ರಿಟಿ ಮದುವೆ ಇಷ್ಟು ಸರಳವಾಗಿ ಆಗೋಕೆ ಸಾಧ್ಯವಾ? ಅಜಯ್ ಮತ್ತು ಕಾಜೋಲ್ ಆಗಿ ತೋರಿಸಿದ್ದಾರಲ್ಲ ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net