

ಕರೊನಾದಿಂದ ದೇಶದ ಜನತೆ ಮನೆಯಲ್ಲೇ ಕಾಲಕಳೆಯುತ್ತಿದೆ. ಸರ್ಕಾರ, ಪೊಲೀಸ್ ಇಲಾಖೆ, ಸಿನಿಮಾ ಮಂದಿ ಸೇರಿ ಹಲವರು ಜಾಗೃತಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಬಿಗ್ ಬಿ ಅಮಿತಾಬ್ ಬಚ್ಚನ್, ರಜನಿಕಾಂತ್ ಕರೊನಾ ಕುರಿತ ಕಿರುಚಿತ್ರ ಮಾಡುತ್ತಿದ್ದಾರೆ. ಅದು ಇಂದು ರಾತ್ರಿ 9ಕ್ಕೆ ಸೋನಿ ಪಿಕ್ಚರ್ಸ್ನಲ್ಲಿ ಪ್ರಸಾರವಾಗಲಿದೆ. ಈಗ ಅದೇ ಹಾದಿಯಲ್ಲಿ ಅಕ್ಷಯ್ ಕುಮಾರ್ ಸೇರಿ ಹತ್ತು ಹಲವು ಬಾಲಿವುಡ್ ಸ್ಟಾರ್ಗಳು ಒಟ್ಟಿಗೆ ಕೈ ಜೋಡಿಸಿ ಕರೊನಾ ಜಾಗೃತಿ ಮತ್ತು ಸ್ಫೂತಿರ್ದಾಯಕ ಸಂದೇಶವನ್ನು ಹಾಡಿನ ಮೂಲಕ ಹೊತ್ತು ಬರಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಅಕ್ಷಯ್ ಕುಮಾರ್, ವಿಕ್ಕಿ ಕೌಶಲ್, ಟೈಗರ್ ಶ್ರಾಫ್, ತಾಪ್ಸೀ ಪನ್ನು, ಭೂಮಿ ಪಡ್ನೇಕರ್, ಕಾರ್ತಿಕ್ ಆರ್ಯನ್, ಕೃತಿ ಸನೂನ್, ಆಯುಷ್ಮಾನ್ ಖುರಾನಾ, ಕಿಯಾರಾ ಅಡ್ವಾನಿ, ರಾಜ್ಕುಮಾರ್ ರಾವ್, ಸಿದ್ಧಾರ್ಥ್ ಮಲ್ಹೋತ್ರಾ, ಅನನ್ಯ ಪಾಂಡೆ ಸೇರಿ ಇನ್ನೂ ಹಲವರು "ಮುಸ್ಕೂರಾಯೇ ಇಂಡಿಯಾ' ಶೀಷಿರ್ಕೆಯಲ್ಲಿ ಹಾಡು ಮೂಡಿಬರಲಿದ್ದು, ವಿಶಾಲ್ ಮಿಶ್ರಾ ಹಾಡನ್ನು ಕಂಪೋಸ್ ಮಾಡಿ ಧ್ವನಿ ಸಹ ನೀಡಿದ್ದಾರೆ. ಈ ಎಲ್ಲ ಕಲಾವಿದರು ಮನೆಯಲ್ಲಿದ್ದುಕೊಂಡೆ ಹಾಡಿಗೆ ತಕ್ಕಂತೆ ವಿಡಿಯೋ ಮಾಡಿ ಕಳುಹಿಸಿದ್ದು, ಇಂದೇ ಯೂಟ್ಯೂಬ್ನಲ್ಲಿ ರಿಲೀಸ್ ಆಗಲಿದೆ. ಅಂದಹಾಗೆ ಜಾಕಿ ಬಗ್ನಾನಿ ಈ ಹಾಡಿನ ಸೂತ್ರಧಾರ. (ಏಜೆನ್ಸೀಸ್)