ಮಕ್ಕಳು ಮಾಡಿಕೊಳ್ಳುವ ಬಯಕೆಯಾಗಿದೆ! ವೇದಿಕೆ ಮೇಲೆಯೇ ಸಚಿವನಿಗೆ ಗಾಳ ಹಾಕಿದ ನಟಿ ಐಶ್ವರ್ಯಾ

Aishwarya Rajesh
Published on

ಚೆನ್ನೈ: ಟಿವಿ ನಿರೂಪಕಿಯಾಗಿ ಬಣ್ಣದ ಜಗತ್ತಿಗೆ ಕಾಲಿಟ್ಟ ಐಶ್ವರ್ಯಾ, ಮಾನಡಾ ಮೈಲಾಡ ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿ ಭಾಗವಹಿಸುವ ಮೂಲಕ ಗೆಲುವು ಸಹ ಸಾಧಿಸಿದರು. ಅಟ್ಟಕಾತಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಐಶ್ವರ್ಯಾ, ಮೊದಲ ಸಿನಿಮಾದಲ್ಲೇ ಎಲ್ಲರ ಗಮನ ಸೆಳೆದರು. ತಮಿಳು ಮತ್ತು ತೆಲುಗು ಭಾಷೆಯ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಐಶ್ವರ್ಯಾ, ತಮ್ಮ ನಟನೆಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ತಾಜಾ ಸಂಗತಿಯೇನೆಂದರೆ, ಇತ್ತೀಚೆಗೆ ಶ್ರೀಲಂಕಾದ ನುವಾರಾ ಎಲಿಯಾ ಜಿಲ್ಲೆಯಲ್ಲಿ ಪೊಂಗಲ್​ ಹಬ್ಬ ಆಯೋಜಿಸಲಾಗಿತ್ತು. ಈ ಹಬ್ಬಕ್ಕೆ ಐಶ್ವರ್ಯಾ ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಯುಕ್ತಾ, ಐಶ್ವರ್ಯಾ ದತ್ತಾ ಮತ್ತಿತರರು ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ್ದ ಐಶ್ವರ್ಯಾ, ನಾನು ಅಂದುಕೊಂಡಂತೆ ಪೊಂಗಲ್ ಆಚರಣೆ ಚೆನ್ನಾಗಿತ್ತು ಎಂದರು.

ಇದೇ ಕಾರ್ಯಕ್ರಮಕ್ಕೆ ಲಂಕಾ ಸಚಿವ ಜೀವನ್​ ಎಂಬುವರು ಕೂಡ ಭಾಗವಹಿಸಿದ್ದರು. ಈ ಬಗ್ಗೆ ಮಾತನಾಡಿರುವ ಐಶ್ವರ್ಯಾ, ಕಾರ್ಯಕ್ರಮಕ್ಕೆ ಬರುವ ಮುಂಚೆ ಸಚಿವರಿಗೆ ವಯಸ್ಸಾಗಿರುತ್ತದೆ ಅಂತಾ ನಾನು ಅಂದುಕೊಂಡಿದ್ದೆ. ಆದರೆ, ಸಚಿವರು ಯುವಕರಾಗಿದ್ದಾರೆ. ಅಲ್ಲದೆ, ಹ್ಯಾಂಡ್​ಸಮ್​ ಕೂಡ ಹೌದು ಎಂದು ಐಶ್ವರ್ಯಾ ವೇದಿಕೆ ಮೇಲೆಯೇ ನಾಚಿ ನೀರಾದರು. ಇದೇ ಮೊದಲ ಬಾರಿಗೆ ಯುವಕನೊಬ್ಬ ಸಚಿವರಾಗಿರುವುದನ್ನು ನೋಡಿದೆ ಎಂದರು.

ಮಾತು ಮುಂದುವರಿಸಿದ ಐಶ್ವರ್ಯಾ, ಜೀವನ್​ ಅವರು ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ ಎಂದು ನಾನು ಕೇಳಿದ್ದೇನೆ. ಜೀವನ್​ ಅವರ ಕೆಲಸ ಸಾಕಷ್ಟು ಬಡವರಿಗೆ ನೆರವಾಗಲಿದೆ. ನಮ್ಮ ಊರಲ್ಲಿ ಇಂಥಾ ಒಬ್ಬ ಯುವ ಸಚಿವ ಇಲ್ಲವಲ್ಲ ಎಂದು ಹೊಟ್ಟೆಕಿಚ್ಚು ಆಗುತ್ತಿದೆ ಎಂದು ಐಶ್ವರ್ಯಾ ಹೇಳಿದರು. ಅಲ್ಲದೆ, ಇದೇ ಸಂದರ್ಭದಲ್ಲಿ ನನಗೂ ಮದುವೆಯಾಗಿ, ಮಕ್ಕಳು ಮಾಡಿಕೊಳ್ಳುವ ಬಯಕೆ ಇದೆ ಎಂದು ಐಶ್ವರ್ಯಾ ಹೇಳಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net