

ಐಶ್ವರ್ಯಾ ರೈಗೆ ಮಾಡಲಿಂಗ್, ರ‍್ಯಾಂಪ್ ವಾಕ್ ಯಾವುದೂ ಹೊಸದಲ್ಲ. ಸಿನಿಮಾ ನಟಿಯಾಗುವುದಕ್ಕೆ ಮುನ್ನ ಅವರು ಅದೆಷ್ಟು ಶೋಗಳಲ್ಲಿ ಕ್ಯಾಟ್ವಾಕ್ ಮಾಡಿದ್ದರೋ ಲೆಕ್ಕ ಇಟ್ಟವರಿಲ್ಲ. ಆದರೆ, ಇತ್ತೀಚಿನ ವರ್ಷಗಳಲ್ಲಿ ಮಾಡಲಿಂಗ್ನಿಂದ ದೂರವಿದ್ದ ಅವರು, ಪ್ಯಾರಿಸ್ನಲ್ಲಿ ನಡೆದ ಪ್ಯಾರಿಸ್ ಫ್ಯಾಶನ್ ವೀಕ್ನಲ್ಲಿ ರ‍್ಯಾಂಪ್ ವಾಕ್ ಮಾಡಿದ್ದಾರೆ. ಪ್ಯಾರಿಸ್ನ ಐಫೆಲ್ ಟವರ್ ಎದುರು ನಡೆದ ಈ ಕಾರ್ಯಕ್ರಮದಲ್ಲಿ ಹಲವು ದೇಶಗಳ ಪ್ರಖ್ಯಾತ ಮಾಡಲ್ಗಳು ಮತ್ತು ನಟಿಯರು ಭಾಗವಹಿಸಿದ್ದರು. ಇದರಲ್ಲಿ ಭಾಗವಹಿಸುವುದಕ್ಕೆ ಐಶ್ವರ್ಯಾ ಸಹ ಪತಿ ಅಭಿಷೇಕ್ ಮತ್ತು ಮಗಳು ಆರಾಧ್ಯ ಜತೆಗೆ ಅಲ್ಲಿಗೆ ಹೋಗಿದ್ದರು.
ಅಚ್ಚ ಬಿಳುಪಿನ ಡ್ರೆಸ್ ತೊಟ್ಟು, ತುಟಿಗೆ ಪಿಂಕ್ ಲಿಪ್ಸ್ಟಿಕ್ ಹಚ್ಚಿಕೊಂಡು ಸುಂದರವಾಗಿ ಕಾಣಿಸುತ್ತಿದ್ದ ಐಶ್ವರ್ಯಾ, ಕ್ಯಾಟ್ ವಾಕ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ. ಈ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳಾದ ಹೆಲೆನ್ ಮಿರ್ರೆನ್, ಕ್ಯಾಮಿಲಾ ಕ್ಯಾಬೆಲ್ಲೋ, ಅಂಬೆರ್ ಹರ್ಡ್ ಸಹ ಭಾಗವಹಿಸಿದ್ದು, ಅವರೆಲ್ಲರ ಜತೆಗೆ ಐಶ್ವರ್ಯಾ ಸಹ ಹೆಜ್ಜೆ ಹಾಕಿದ್ದು ವಿಶೇಷ.