ಲೇಟಾದ್ರೂ ಚೌತಿಗೆ ಡಿಫರೆಂಟ್‌ ಆಗಿ ವಿಷ್‌ ಮಾಡಿದ ನಟಿ ಐಂದ್ರಿತಾ ರೇ..!

aindrita
Published on

ಬೆಂಗಳೂರು: ಗಣೇಶ ಚತುರ್ಥಿಯ ಸಲುವಾಗಿ ಬೆಳಗ್ಗೆಯಿಂದಲೂ ಸ್ಯಾಂಡಲ್‌ವುಡ್‌ನ ಹಲವರು ಶುಭಾಶಯ ತಿಳಿಸಿ ಸೋಷಿಯಲ್‌ ಮೀಡಿಯಾಗಳಲ್ಲಿ ಪೋಸ್ಟ್‌ ಮಾಡಿದ್ದಾರೆ. ಆ ಪೈಕಿ ನಟಿ ಐಂದ್ರಿತಾ ರೇ ಸ್ವಲ್ಪ ತಡವಾದರೂ ವಿಭಿನ್ನವಾದ ಶುಭಾಶಯವೊಂದನ್ನು ಕೋರಿದ್ದಾರೆ. ಆ ಮೂಲಕ ಪರಿಸರ ಸ್ನೇಹಿ ಗಣೇಶನನ್ನು ಕೂರಿಸಿದರಷ್ಟೇ ಸಾಲದು, ನಿಜವಾಗಿಯೂ ನಾವು  ಪರಿಸರಸ್ನೇಹಿಯಾಗಿ ಇರಬೇಕು ಎಂಬ ಸಂದೇಶವೊಂದನ್ನು ಸಾರಿದ್ದಾರೆ.

ಈ ಗಣೇಶ ಚತುರ್ಥಿ ನಾವು ಬರೀ ಮೂರ್ತಿ ಪೂಜೆಗೆ ಮಾತ್ರ ಸೀಮಿತವಾಗಿಸದೆ ಅದರ ನೈಜ ಅಸ್ತಿತ್ವವನ್ನು ಗೌರವಿಸಿ ಪೂಜಿಸೋಣ ಎಂದಿದ್ದಾರೆ. ಆನೆಗಳು ಬರೀ ಮೋಜಿನ ಸವಾರಿ ಅಥವಾ ಸರ್ಕಸ್‌ ಇಲ್ಲವೇ ದೇವಸ್ಥಾನಗಳಲ್ಲಿ ಬಂಧಿ ಆಗಿ ಇರಿಸಲಿಕ್ಕಲ್ಲ. ಆನೆಗಳನ್ನು ಅವುಗಳ ಸಹಜ ಪರಿಸರದಲ್ಲಿ ಇರಿಸಬೇಕು ಎಂದು ಕೋರಿರುವ ಅವರು ಆ ಮೂಲಕ ಗಣೇಶ ಚತುರ್ಥಿಯ ಶುಭಾಶಯ ಕೋರಿದ್ದಾರೆ.

ಅಂದರೆ ಆನೆಗಳನ್ನು ಹಿಡಿದಿಡುವ ಅಥವಾ ಹಿಂಸಿಸುವ ಬದಲು ಅವುಗಳನ್ನು ಕಾಡಲ್ಲಿ ಅವುಗಳ ಪಾಡಿಗೆ ಅವುಗಳು ಇರುವಂತೆ ನೋಡಿಕೊಳ್ಳಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net