ಹೊಡೆದಾಟಕ್ಕಿಳಿದ್ರಾ ದಿಗಂತ್- ಐಂದ್ರಿತಾ! ಲಾಕ್​ಡೌನ್​ನಲ್ಲೇ ಜೀವರಕ್ಷಕ ಕಲೆಗಳತ್ತ ದೃಷ್ಟಿ

page 10 2
Published on

ಬೆಂಗಳೂರು: ಲಾಕ್​ಡೌನ್ ವೇಳೆಯಲ್ಲಿ ಬಹುತೇಕರು ಅಡುಗೆ, ಓದು, ವ್ಯಾಯಾಮದ ಕಡೆ ಹೆಚ್ಚು ವಾಲಿದ್ದಾರೆ. ಫ್ಯಾಮಿಲಿ ಜತೆ ಖುಷಿಯ ಕ್ಷಣಗಳನ್ನು ಅನುಭವಿಸುತ್ತಿದ್ದಾರೆ. ಅದೇ ರೀತಿ ಸ್ಯಾಂಡಲ್​ವುಡ್ ತಾರೆಯರಾದ ದೂದ್​ಪೇಡಾ ದಿಗಂತ್ ಮಂಚಾಲೆ ಮತ್ತು ನಟಿ ಐಂದ್ರಿತಾ ರೇ ಜೀವರಕ್ಷಕ ಕಲೆಗಳತ್ತ ದೃಷ್ಟಿ ನೆಟ್ಟಿದ್ದಾರೆ. ಅವುಗಳ ಬಳಕೆ ಹೇಗೆ ಎಂಬುದನ್ನು ವಿಡಿಯೋ ಸಮೇತ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ದಿಗಂತ್​ಗೆ ಮೊದಲಿನಿಂದಲೂ ಫಿಟ್​ನೆಸ್ ಮತ್ತು ಹೊಸದನ್ನು ಕಲಿಯುವ ಹಂಬಲ. ಹಾಗಾಗಿ ಏನಾದರೊಂದು ಹೊಸ ಕೆಲಸದಲ್ಲಿ ತೊಡಗಿಸಿಕೊಂಡಿರುತ್ತಾರೆ. ಸೋಲೋ ಬೈಕ್ ರೈಡ್, ಸೈಕಲ್ ರೈಡ್ ಹೋಗುವುದನ್ನು ಈಗಾಗಲೇ ನೋಡಿದ್ದೀರಿ. ಈಗ ಅದೇ ರೀತಿ ರೋಪ್ಡ್ ಆರ್ಟ್​ನ ಪ್ರಾಥಮಿಕ ಕಲಿಕಾ ವಿಧಾನಗಳನ್ನು ದಿಗಂತ್ ಕಲಿಯುತ್ತಿದ್ದಾರೆ. ಮನೆಯ ಮಹಡಿ ಮೇಲೆ ನಿಂತು ಕೈಯಲ್ಲಿ ಹಗ್ಗ ಹಿಡಿದುಕೊಂಡು, ಒಂದಷ್ಟು ಪಟ್ಟುಗಳನ್ನು ಹಾಕುತ್ತಿದ್ದಾರೆ.

ಇತ್ತ ಐಂದ್ರಿತಾ ಸಹ ನನ್​ಚೆಕ್ ಪಟ್ಟುಗಳತ್ತ ಗಮನಹರಿಸಿದ್ದಾರೆ. ಈಗಷ್ಟೇ ಕಲಿಕಾ ಹಂತದಲ್ಲಿ ಇರುವುದರನ್ನು ಸ್ವತಃ ಅವರೇ ಹೇಳಿಕೊಂಡಿದ್ದು, ವಿಶೇಷ ಏನೆಂದರೆ, ಈ ಜೀವರಕ್ಷಕ ಕಲೆಯನ್ನು ಕುಂಗ್ಪು ಯೋಗಿ ಎಂಬುವವರು ಲೈವ್ ಮೂಲಕ ದಿಗಂತ್ ಮತ್ತು ಐಂದ್ರಿತಾಗೆ ಹೇಳಿಕೊಡುತ್ತಿದ್ದಾರೆ. ಸದ್ಯ ಸಿನಿಮಾ ವಿಚಾರಕ್ಕೆ ಬರುವುದಾದರೆ, ‘ಹುಟ್ಟುಹಬ್ಬದ ಶುಭಾಶಯಗಳು’, ‘ಮಾರಿಗೋಲ್ಡ್’, ‘ಗಾಳಿಪಟ 2’ ಸೇರಿ ಹಲವು ಸಿನಿಮಾಗಳಲ್ಲಿ ದಿಗಂತ್ ಬಿಜಿಯಾಗಿದ್ದಾರೆ. ಐಂದ್ರಿತಾ ಸಹ ಹಲವು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದು, ಲಾಕ್​ಡೌನ್ ತೆರವಾಗುತ್ತಿದ್ದಂತೆ ಸಿನಿಮಾ ಕೆಲಸಗಳತ್ತ ಗಮನಹರಿಸಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net