ನಟಿ ಸಾಯಿ ಪಲ್ಲವಿ ಅಲ್ಲ, ರುಕ್ಮಿಣಿಯೂ ಅಲ್ಲ; MS Subbulakshmi ಬಯೋಪಿಕ್‌ಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಆಯ್ಕೆ?

MS Subbulakshmi in upcoming biopic
MS Subbulakshmi in upcoming biopic
Published on

ಪ್ರಮುಖ ಮುಖ್ಯಾಂಶಗಳು

  • ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಜೀವನಾಧಾರಿತ ಚಿತ್ರಕ್ಕೆ ನಟಿ ಯಾರೆನ್ನುವುದೇ ಗೊಂದಲ
  • ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಬಳಿಕ ರಶ್ಮಿಕಾ ಮಂದಣ್ಣ ಹೆಸರು ಮುಂಚೂಣಿಗೆ
  • ಈಗಾಗಲೇ ರಶ್ಮಿಕಾ ಅವರು ತಮ್ಮ ನಿವಾಸದಲ್ಲಿ ಲುಕ್​ ಟೆಸ್ಟ್​ ನೀಡಿದ್ದಾರೆ ಎನ್ನುವ ಊಹಾಪೋಹ ಹೆಚ್ಚಳ
MS Subbulakshmi in upcoming biopic : ಭಾರತದ ನೈಂಟಿಗೇಲ್​​, ಸಂಗೀತದ ರಾಣಿ ಹೀಗೆ ನಾನಾ ಹೆಸರಿನಲ್ಲಿ  ಎಂಸ್ ಸುಬ್ಬುಲಕ್ಷ್ಮಿ ಅವರನ್ನು ಕರೆಯಲಾಗುತ್ತದೆ. ಇವ್ರು ಕರ್ನಾಟಕ ಸಂಗೀತ ಶ್ರೇಷ್ಠ ಗಾಯಕಿಯರಲ್ಲಿ ಒಬ್ಬರು. ಭಾರತ ರತ್ನ ಪಡೆದ ಮೊದಲ ಮಹಿಳೆ ಎನ್ನುವ ಹೆಗ್ಗಳಿಕೆ ಪಡೆದ ಇವರ ಜೀವನಾಧಾರಿತ ಸಿನಿಮಾ ಮಾಡಲು 'ಜೆರ್ಸಿ' ಖ್ಯಾತಿಯ ನಿರ್ದೇಶಕ ಗೌತಮ್​ ತಿನ್ನನೂರಿ ಅವರು ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಆಯ್ಕೆಯಾಗಿರುವ ನಟಿಯಾದರು ಯಾರು ಎನ್ನುವ ಗೊಂದಲವೇ ಹೆಚ್ಚು ಊಹಾಪೋಹಕ್ಕೆ ಕಾರಣವಾಗಿದೆ.
ಈ ಮುಂಚೆ ನಟಿ ಸಾಯಿಪಲ್ಲವಿ ನಟಿಸಿಲಿದ್ದಾರೆ ಎನ್ನುವ ಊಹಾಪೋಹವಿತ್ತು ಆನಂತರ ಕನ್ನಡದ ನಟಿ  ರುಕ್ಮಿಣಿ ವಸಂತ್​ ಎನ್ನಲಾಗಿತ್ತು. ಈಗ ನ್ಯಾಶನಲ್​ ಕ್ರಶ್​​ ರಶ್ಮಿಕಾ ಮಂದಣ್ಣ ನಟಿಸಲಿದ್ದಾರೆ ಎಂದು ಇತ್ತೀಚಿನ ವರದಿಗಳಲ್ಲಿ ತಿಳಿದುಬಂದಿದೆ.

ಲುಕ್​ಟೆಸ್ಟ್ ನಡೆಸಿರುವ ರಶ್ಮಿಕಾ ಮಂದಣ್ಣ?

ಖ್ಯಾತ ನಟಿ ರಶ್ಮಿಕಾ ಮಂದಣ್ಣ ಅವರು ಈ ಪ್ರಮುಖ ಪಾತ್ರಕ್ಕೆ ಆಯ್ಕೆಯಾಗಿದ್ದಾರೆ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೇ ಅವರ ನಿವಾಸದಲ್ಲಿ ಪಾತ್ರಕ್ಕೆ ಸೂಕ್ತವಾಗುವಂತೆ 'ಲುಕ್ ಟೆಸ್ಟ್' ಕೂಡ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಪ್ರಶಸ್ತಿ ವಿಜೇತ 'ಜೆರ್ಸಿ' ಚಿತ್ರದ ನಿರ್ದೇಶಕ ಗೌತಮ್ ತಿನ್ನನೂರಿ ಈ ಬಯೋಪಿಕ್ ಅನ್ನು ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಚಿತ್ರತಂಡದ ಕಡೆಯಿಂದ ಇನ್ನು ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ.

 ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಯಾರು ಆಯ್ಕೆ?

ಈ ಹಿಂದೆ  ಎಂ. ಎಸ್. ಸುಬ್ಬುಲಕ್ಷ್ಮಿ  ಜೀವನಾಧಾರಿತ ಚಿತ್ರದಲ್ಲಿ ನಟಿ ಸಾಯಿ ಪಲ್ಲವಿ  ನಟಿಸುತ್ತಾರೆ ಎನ್ನಲಾಗಿತ್ತು. ಪಾತ್ರದ ಹಿನ್ನೆಲೆಗಾಗಿ ಸಾಯಿ ಪಲ್ಲವಿ ಅವರು ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯಲು ಹಾಗೂ ಸುಬ್ಬುಲಕ್ಷ್ಮಿ ಅವರ ಹಳೆಯ ವಿಡಿಯೋಗಳನ್ನು ನೋಡಿ ತಯಾರಿ ನಡೆಸಲು ಆರಂಭಿಸಿದ್ದರು  ಎನ್ನುವ ಮಾತು ಇತ್ತು. ಆದರೆ, ಆ ಬಳಿಕ ಸಾಯಿ ಪಲ್ಲವಿ ಅವರ ಜಾಗಕ್ಕೆ ಕನ್ನಡದ ನಟಿ ರುಕ್ಮಿಣಿ ವಸಂತ್ ಅವರನ್ನು ಪರಿಗಣಿಸಲಾಗುತ್ತಿದೆ  ಎನ್ನುವ ಊಹಾಪೋಹವು ಜೋರಾಗಿತ್ತು. 
ಸದ್ಯ ಈ ಸಿನಿಮಾದಲ್ಲಿ ಯಾರು ನಟಿಸುತ್ತಾರೆ ಎನ್ನುವ  ನಿಖರ ಮಾಹಿತಿ ಹೊರಬಿದ್ದಿಲ್ಲ.  ಮೂವರೂ ಸಹ ಬೇರೆ ಬೇರೆ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಅವರು ಮೈಸಾ, ರಣಬಾಲಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಇತ್ತ ರುಕ್ಮಿಣಿ ವಸಂತ್ ಅವರು ಜೂನಿಯರ್ ಎನ್‌ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್‌ನ 'ಡ್ರ್ಯಾಗನ್' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಇನ್ನು ಸಾಯಿ ಪಲ್ಲವಿ ಅವರು ರಣಬೀರ್ ಕಪೂರ್ ಜೊತೆ 'ರಾಮಾಯಣ' ಚಿತ್ರದಲ್ಲಿ ನಿರತರಾಗಿದ್ದಾರೆ. ಮೂವರು ಸ್ಟಾರ್ ನಟಿಯರ ಹೆಸರುಗಳು ಈ ಬಯೋಪಿಕ್‌ಗೆ ಜೋಡಣೆಯಾಗಿದ್ದು, ಅಂತಿಮವಾಗಿ ಎಂ. ಎಸ್. ಸುಬ್ಬುಲಕ್ಷ್ಮಿ ಅವರ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬುದನ್ನು ತಿಳಿಯಲು ಅಧಿಕೃತ ಮಾಹಿತಿ ಹೊರಬೀಳುವವರೆಗೂ ಕಾಯಬೇಕಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net