ಕಮಲ್​ ಹಾಸನ್​ ಬಳಿಕ ಕರೊನಾ ಚಿಕಿತ್ಸೆಗೆ ಬೃಹತ್​ ಕಲ್ಯಾಣಮಂಟಪವನ್ನೇ ನೀಡಲು ಮುಂದಾದ ಸೂಪರ್​ಸ್ಟಾರ್​

rajani
Published on

ಚೆನ್ನೈ: ತಮಿಳುನಾಡಿನಲ್ಲಿ ಕರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ. ಅಲ್ಲಿನ ಸರ್ಕಾರವೂ ಕರೊನಾ ಹರಡುವಿಕೆ ತಡೆಗಟ್ಟಲು ಪಣತೊಟ್ಟಿದೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಚಿಕಿತ್ಸಾ ಕೊಠಡಿಗಳ ಅಗತ್ಯವೂ ಅಷ್ಟೇ ಬಹುಮುಖ್ಯವಾದದ್ದು. ಆ ಅವಶ್ಯಕತೆಯನ್ನು ನಿಗಿಸಲು ಸೂಪರ್​ಸ್ಟಾರ್ ರಜನಿಕಾಂತ್​ ಮುಂದಾಗಿದ್ದಾರೆ. ಅಂದರೆ, ರಜನಿ ಒಡೆತನದ ಚೆನ್ನೈನ ಕೋದಂಬಕಂನಲ್ಲಿರುವ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪವನ್ನು ಕರೊನಾ ಐಸೋಲೇಶನ್​ ಚಿಕಿತ್ಸೆಗೆಂದು ನೀಡಲು ಮುಂದೆ ಬಂದಿದ್ದಾರೆ. ಈಗಾಗಲೇ ಈ ಕುರಿತು ತಮಿಳುನಾಡು ಸಿಎಂಗೆ ಪತ್ರದ ಮೂಲಕ ಈ ವಿಚಾರವನ್ನು ತಿಳಿಸಿದ್ದಾರೆ. ಅಂದಹಾಗೆ ಕೆಲ ವರ್ಷಗಳ ಹಿಂದೆ ಚೆನ್ನೈನಲ್ಲಿ ನೆರೆಹಾವಳಿ ಸಂಭವಿಸಿದಾಗಲೂ ಕಲ್ಯಾಣ ಮಂಟಪವನ್ನು ನಿರಾಶ್ರಿತರಿಗೆ ನೀಡಿದ್ದರು ರಜನಿ.
ಇತ್ತೀಚೆಗಷ್ಟೇ ನಟ ಕಮಲ್ ಹಾಸನ್ ಸಹ ಚೆನ್ನೈನ ಎಲ್ಡಾಮ್​ ರಸ್ತೆಯಲ್ಲಿ ಬೃಹತ್​ ಕಚೇರಿಯನ್ನು ಆಸ್ಪತ್ರೆಯನ್ನಾಗಿಸಿಕೊಂಡು ಕರೊನಾ ರೋಗಿಗಳ ಚಿಕಿತ್ಸೆಗೆ ಬಳಸಿಕೊಳ್ಳಬಹುದೆಂದು ಹೇಳಿದ್ದರು. ಶಾರುಖ್​ ಖಾನ್​ ಸಹ ತಮ್ಮ ಬಹುಮಹಡಿ ಕಟ್ಟಡವನ್ನು ನೀಡಲು ಮುಂದೆ ಬಂದಿದ್ದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net