ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿಯ ಏರ್ ಷೋ ಇಂದು(ಬುಧವಾರ) ಆರಂಭವಾಗಿದ್ದು, ಲೋಹದ ಹಕ್ಕಿಗಳ ಕಲರವ ಕಣ್ಮನ ಸೆಳೆಯುತ್ತಿದೆ. ಫೆ.3ರಿಂದ 5ರವರೆಗೆ ನಡೆಯುತ್ತಿರುವ ಏರ್ ಷೋದಲ್ಲಿ ಡಕೋಟಾ, ಸುಖೋಯ್, ರಫೆಲ್, ಎಲ್ಸಿಎಚ್, ಎಲ್ಯುಎಚ್, ಜಾಗ್ವಾರ್, ಹಾಕ್ ಸೇರಿ ಇನ್ನಿತರ ಫೈಟರ್ ಜೆಟ್ ಏರ್ ಕ್ರಾಫ್ಟ್ ಪ್ರದರ್ಶನದಲ್ಲಿ ಪಾಲ್ಗೊಂಡಿವೆ. ಇದೇ ಮೊದಲ ಬಾರಿಗೆ ಸೂರ್ಯ ಕಿರಣ್ ಹಾಗೂ ಸಾರಂಗ್ ವೈಮಾನಿಕ ಪ್ರದರ್ಶನ ತಂಡಗಳು ಜಂಟಿ ಪ್ರದರ್ಶನ ನೀಡಿದವು. 'ಚಿನೂಕ್ ಟ್ವಿನ್ ಎಂಜಿನ್' ಹೆಲಿಕಾಪ್ಟರ್ ತಾಲೀಮು ಕೂಡ ಮನಸೆಳೆಯುತ್ತಿದೆ. ಅಮೆರಿಕದ ಯುದ್ಧ ವಿಮಾನ B1B ಸೂಪರ್ ಸಾನಿಕ್ ಬಾಂಬರ್ ಕೂಡ ಹಾರಾಟ ನಡೆಸಿತು. ಒಟ್ಟಾರೆ ಏರೋ ಇಂಡಿಯಾ 2021- ಬಾನಂಗಳದಲ್ಲಿ ಲೋಹದ ಹಕ್ಕಿಗಳ ಕಲರವಕ್ಕೆ ಸಾಕ್ಷೀಕರಿಸಿದ ಅದ್ಭುತ ಚಿತ್ರಗಳು ಇಲ್ಲಿವೆ. 'ವಿಜಯವಾಣಿ' ಫೋಟೋಗ್ರಾಫರ್ ಸುಧೀಂದ್ರ ಶ್ರೀರಂಗರಾಜು ಸೆರೆಹಿಡಿದ ಫೋಟೋಗಳಿವು.