ಕೃಷ್ಣನ ಜತೆಗೆ ಅದ್ವಿತಿ ಶೆಟ್ಟಿ; ಮೂರನೆಯವರಿಗೆ ಹುಡುಕಾಟ

Advithi Shetty
Published on

ಬೆಂಗಳೂರು: ‘ಲವ್ ಮಾಕ್​ಟೇಲ್’ ಕೃಷ್ಣ ಅಭಿನಯದ ‘ಶುಗರ್ ಫ್ಯಾಕ್ಟರಿ’ಗೆ ಸೋನಲ್ ಮಾಂತೆರೋ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಕಳೆದ ತಿಂಗಳೇ ಬಂದಿತ್ತು. ಈ ಚಿತ್ರದಲ್ಲಿ ಮೂವರು ನಾಯಕಿಯರಿದ್ದು ಇನ್ನಿಬ್ಬರು ನಾಯಕಿಯರ ಆಯ್ಕೆ ನಡೆಯುತ್ತಿದೆ ಎಂದು ಹೇಳಲಾಗಿತ್ತು. ಈಗ ಎರಡನೆಯ ನಾಯಕಿಯಾಗಿ ಅದ್ವಿತಿ ಶೆಟ್ಟಿ ಆಯ್ಕೆಯಾಗಿದ್ದು, ಮೂರನೆಯ ನಾಯಕಿಗಾಗಿ ಹುಡುಕಾಟ ನಡೆದಿದೆ.

ಅಮೂಲ್ಯ ಅವರ ಸಹೋದರ ದೀಪಕ್ ಅರಸ್ ನಿರ್ದೇಶಿಸುತ್ತಿರುವ ‘ಶುಗರ್ ಫ್ಯಾಕ್ಟರಿ’ ಚಿತ್ರವು ಜನವರಿಯಲ್ಲಿ ಪ್ರಾರಂಭ ಆಗಲಿದ್ದು, ಗಿರೀಶ್ ಎನ್ನುವವರು ನಿರ್ವಿುಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರವಾಗಿದ್ದು, ಸಂತೋಷ್ ರೈ ಪಾತಾಜೆ ಛಾಯಾಗ್ರಹಣ ಮಾಡಿದರೆ, ಕಬೀರ್ ರಫಿ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net