ಈ ನಟ ದಿನ ತಿನ್ನೋದೇ ಮೊಟ್ಟೆ! 40 ನೇ ವಯಸ್ಸಿನಲ್ಲಿಯೂ ಆದಿತ್ಯ ರಾಯ್ ಕಪೂರ್ ಸಖತ್​ ಫಿಟ್​.. Aditya Roy Kapur

ಆದಿತ್ಯ ರಾಯ್​ ಕಪೂರ್​ (Instagram ನಿಂದ ಫೋಟೋ ತೆಗೆದುಕೊಳ್ಳಲಾಗಿದೆ)
ಆದಿತ್ಯ ರಾಯ್​ ಕಪೂರ್​ (Instagram ನಿಂದ ಫೋಟೋ ತೆಗೆದುಕೊಳ್ಳಲಾಗಿದೆ)
Published on

ಪ್ರಮುಖ ಮುಖ್ಯಾಂಶಗಳು

  • ಆದಿತ್ಯ ರಾಯ್ ಕಪೂರ್ ಆಹಾರದಲ್ಲಿ ಮೊಟ್ಟೆಗಳನ್ನು ಸೇವಿಸುವುದರ ಮೂಲಕ ಪ್ರೊಟೀನ್​ ಪಡೆಯುತ್ತಾರಂತೆ
  • ಬೆಳಿಗ್ಗೆ ಒಂದು ಬಟ್ಟಲು ಓಟ್ಸ್ ಜೊತೆಗೆ ಸ್ವಲ್ಪ ಮೊಟ್ಟೆ ಸೇವಿಸುತ್ತೇನೆ
  • ಎಂಟು ವರ್ಷಗಳಿಂದಲೂ ಒಂದೇ ರೀತಿಯ ಆಹಾರ ಯೋಜನೆ ಮಾಡಿಕೊಂಡಿದ್ದೇನೆ
  • ನಾನು ಪ್ರತಿದಿನ ರಾತ್ರಿ ಕೋಳಿ ಕರಿಯನ್ನು ತಪ್ಪದೇ ತಿನ್ನುತ್ತೇನೆ
Aditya Roy Kapur: ಆದಿತ್ಯ ರಾಯ್ ಕಪೂರ್, ತಮ್ಮ ಚಲನಚಿತ್ರಗಳು, ಫಿಟ್ನೆಸ್ ಮತ್ತು ಶಿಸ್ತಿನ ಜೀವನಶೈಲಿಯಿಂದ ಅನೇಕ ಅಭಿಮಾನಿಗಳನ್ನು ಆಕರ್ಷಿಸುತ್ತಲೇ ಇದ್ದಾರೆ. ಅವರ ದೇಹದ ಮೈಕಟ್ಟು ಪ್ರತಿದಿನದ ವ್ಯಾಯಾಮ ತರಬೇತಿ ಮತ್ತು ಪೌಷ್ಟಿಕ-ಸಮೃದ್ಧ ಆಹಾರದ ಪರಿಣಾಮವಾಗಿದೆ. ಸಂದರ್ಶನವೊಂದರಲ್ಲಿ ಆಶಿಕಿ 2 ನಟ ಫಿಟ್​ ಆಗಿರಲು ಅವಲಂಬಿಸಿರುವ ಆಹಾರದ ಬಗ್ಗೆ  ಮಾಹಿತಿ ಹಂಚಿಕೊಂಡಿದ್ದಾರೆ. 
ಆದಿತ್ಯ ರಾಯ್ ಕಪೂರ್ ಮೊದಲು ತಮ್ಮ ಆಹಾರದಲ್ಲಿ ಮೊಟ್ಟೆಗಳನ್ನು ಸೇವಿಸುವುದರ ಮೂಲಕ ಪ್ರೊಟೀನ್​ ಪಡೆಯುತ್ತೇನೆ ಎಂದು ಹೇಳಿದ್ದಾರೆ. 
 ಅವರ 3 ಬಾರಿಯ ಊಟದ ಯೋಜನೆಯ ಬಗ್ಗೆ ಸಂದರ್ಶಕರೊಬ್ಬರು ಪ್ರಶ್ನೆ ಮಾಡಿದಾಗ, ಅದಕ್ಕೆ ಪ್ರತಿಕ್ರಿಯಿಸಿದ ಆದಿತ್ಯ ರಾಯ್ ಕಪೂರ್ ಬೆಳಿಗ್ಗೆ ಒಂದು ಬಟ್ಟಲು "ಓಟ್ಸ್ ಜೊತೆಗೆ ಸ್ವಲ್ಪ ಮೊಟ್ಟೆ" ಸೇವಿಸಿ ತಿನ್ನುತ್ತೇನೆ. ನಂತರ ಮಧ್ಯಾಹ್ನದ ಊಟಕ್ಕೆ 3 ಚಪಾತಿ, ಕೋಳಿ ಮತ್ತು ಧಾನ್ಯಗಳ ಪಲ್ಯವನ್ನು ಸೇವಿಸುವುದಾಗಿ ತಿಳಿಸಿದ್ದಾರೆ. ಸಂಜೆಯ ತಿಂಡಿಗೆ ಆರು ಮೊಟ್ಟೆಗಳು ಹಾಗೂ ರಾತ್ರಿಯ ಊಟದಲ್ಲಿ ಮಾಂಸ ಮತ್ತು ತರಕಾರಿಯನ್ನು ತಿನ್ನುತ್ತೇನೆ. ಹಾಗೆಯೇ, ನಾನು ಪ್ರತಿದಿನ ಕೋಳಿ ಕರಿ ತಿನ್ನುತ್ತೇನೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಆದಿತ್ಯ ರಾಯ್ ಕಪೂರ್ ದಿನಪೂರ್ತಿ ಸ್ವಲ್ಪ ಊಟ ಮಾಡುವುದಾಗಿ ತಿಳಿಸಿದ್ದಾರೆ. ಈ ಸಮಯದಲ್ಲಿ ಹಣ್ಣುಗಳನ್ನೂ ಸೇವಿಸುತ್ತೇನೆ ಅದರಲ್ಲಿ ಮಾವು, ಬೆಂಡಿ ಮತ್ತು ಸೀಗಡಿಗಳನ್ನು ಹೆಚ್ಚಾಗಿ ಸೇವಿಸುತ್ತೇನೆ ಎಂದು ತಿಳಿಸಿದ್ದಾರೆ.

ಆದಿತ್ಯ ರಾಯ್ ಕಪೂರ್ ಅವರ ನೆಚ್ಚಿನ ಚೀಟ್ ಮೀಲ್ಸ್

ಆದಿತ್ಯ ರಾಯ್ ಕಪೂರ್ ಅವರು ಆದಷ್ಟು ಭಾರತೀಯ ಆಹಾರವನ್ನು ಇಷ್ಟಪಡುವುದಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ಅವರ ಹೃದಯಕ್ಕೆ ಹತ್ತಿರವಾದ ಕೆಲವು ವಸ್ತುಗಳು ಚಪಾತಿಯೊಂದಿಗೆ ಮಟನ್ ಕರಿ ಅಥವಾ ಕ್ಲಾಸಿಕ್ ಮಟನ್ ಬಿರಿಯಾನಿ. ಹಾಗೆಯೇ ಅವರ ನೆಚ್ಚಿನ ಸಿಹಿತಿಂಡಿಗಳಾದ ಕ್ಯಾರಟ್​ ಹಲ್ವಾ, ಐಸ್ ಕ್ರೀಮ್, ಆಪಲ್ ಪೈ, ವೇಫಲ್ಸ್ ಮತ್ತು ಪ್ಯಾನ್‌ಕೇಕ್‌ಗಳನ್ನು ಸೇವಿಸುವುದಾಗಿ ಮಾಹಿತಿ ಹಂಚಿದ್ದಾರೆ.
ಎಂಟು ವರ್ಷಗಳ ಹಿಂದೆ ಒಂದೇ ರೀತಿಯ ಉಪಹಾರ ಸೇವಿಸುವ ಬಗ್ಗೆ ಆದಿತ್ಯ ರಾಯ್ ಕಪೂರ್ ಮಾತನಾಡಿದ್ದರು. ಕರೀನಾ ಕಪೂರ್ ಖಾನ್ ಅವರೊಂದಿಗೆ ಪಾಡ್‌ಕ್ಯಾಸ್ಟ್‌ನಲ್ಲಿ ಕಾಣಿಸಿಕೊಂಡ ನಟ ನಾನು ಕಳೆದ 8 ವರ್ಷಗಳಿಂದ ಒಂದೇ ರ್ಈತಿಯ ಆಹಾರ ಪದಾರ್ಥವನ್ನು ಸೇವಿಸುತ್ತಿದ್ದೇನೆ. ಓಟ್ಸ್​ನೊಂದಿಗೆ ಸ್ವಲ್ಪ ಮೊಟ್ಟೆಗಳನ್ನು ಸಹ ತಿನ್ನಲಾಗುತ್ತದೆ ಎಂದು ತಿಳಿಸಿದ್ದಾರೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net