ಮಹಿಳೆಯೊಬ್ಬಳಿಗೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿ, ಮುಂಬೈನ ಅಂಧೇರಿಯಿಂದ ಆಕೆಯ ಹೆಸರಿನಲ್ಲಿ ಬುಕ್ ಮಾಡಲಾದ ಪ್ಯಾಕೇಜ್ನಲ್ಲಿ ನಾಲ್ಕು ಪಾಸ್ಪೋರ್ಟ್ಗಳು, ಮೂರು ಕ್ರೆಡಿಟ್ ಕಾರ್ಡ್ಗಳು ಮತ್ತು ಎಂಡಿಎಂಎ ಸೇರಿದಂತೆ ನಿಷೇಧಿತ ವಸ್ತುಗಳು ಇವೆ ಎಂದು ಹೆದರಿಸಲು ಪ್ರಾರಂಭಿಸಿದ್ದಾನೆ. ಈ ವೇಳೆ ಆಕೆ ನಾನು ಮುಂಬೈಗೆ ಪ್ರಯಾಣಿಸಿಲ್ಲ ಎಂದು ತಿಳಿಸಿದ್ದರೂ, ಆಕೆಗೆ ಆರೋಪಿಗಳು ತಮ್ಮ ಗುರುತನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಈ ವಿಷಯವನ್ನು ಸೈಬರ್ ಅಪರಾಧ ಪ್ರಕರಣವಾಗಿ ಉಲ್ಬಣಗೊಳಿಸಲಾಗುತ್ತಿದೆ ಎಂದು ಭಯಪಡಿಸಿದ್ದಾರೆ.