ವಿಜಯ್ ಸೇತುಪತಿ ‘ತುಘ್ಲಕ್​ ದರ್ಬಾರ್​’ ಚಿತ್ರದಿಂದ ಅದಿತಿ ಔಟ್​, ಈ ನಟಿಯ ಆಗಮನ

tughlaq-durbar
Published on

ಚೆನ್ನೈ: ಮುತ್ತಯ್ಯ ಮುರಳಿಧರನ್​ ಬಯೋಪಿಕ್​ ವಿಚಾರವಾಗಿ ನಟ ವಿಜಯ್ ಸೇತುಪತಿ ಟ್ರೋಲ್​ ಆಗಿದ್ದರು. ಆ ಚಿತ್ರವನ್ನು ಕೈ ಬಿಡುವಂತೆಯೂ ಆಗ್ರಹಿಸಿದ್ದರು. ಅದರಂತೆ, ಇತ್ತೀಚೆಗಷ್ಟೇ 800 ಶೀರ್ಷಿಕೆಯ ಸಿನಿಮಾದಿಂದ ಸೇತುಪತಿ ಹಿಂದೆ ಸರಿದಿದ್ದರು. ಇದೀಗ ವಿಜಯ್​ ಸೇತುಪತಿ ಸಿನಿಮಾದಿಂದ ನಾಯಕಿ ಹಿಂದೆ ಸರಿದಿದ್ದಾರೆ.

ಈಗಾಗಲೇ ಸುದ್ದಿಯಾದಂತೆ ವಿಜಯ್​ ಸೇತುಪತಿ ತುಘ್ಲಕ್​ ದರ್ಬಾರ್ ಚಿತ್ರಕ್ಕೆ ನಾಯಕಿಯಾಗಿ ಅದಿತಿ ರಾವ್​ ಹೈದರಿ ನಟಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಅದನ್ನು ಸ್ವತಃ ಚಿತ್ರತಂಡವೇ ಹೇಳಿಕೊಂಡಿತ್ತು. ಆದರೆ, ಇದೀಗ ಅದೆಲ್ಲವೂ ಉಲ್ಟಾ ಹೊಡೆದಿದೆ. ಚಿತ್ರದಿಂದ ಅದಿತಿ ಕಾಲ್ಕಿತ್ತಿದ್ದು, ಬೇರೆ ನಟಿಯನ್ನು ಕರೆದು ತಂದಿದ್ದಾರೆ ನಿರ್ದೇಶಕರು.

ಅದಿತಿ ಪಾತ್ರವನ್ನು ಇದೀಗ ರಾಶಿ ಖನ್ನಾ ಮಾಡಲಿದ್ದು, ಚಿತ್ರತಂಡ ಅವರನ್ನು ಸ್ವಾಗತಿಸಿದೆ. ಈ ಮೊದಲು ಸಂಗತಮಿಜಾನ್​ ಚಿತ್ರದಲ್ಲಿ ವಿಜಯ್​ ಜತೆಗೆ ರಾಶಿ ನಟಿಸಿದ್ದರು. ಇದೀಘ ತುಘ್ಲಕ್​ ಮೂಲಕ ಎರಡನೇ ಬಾರಿ ಒಂದಾಗುತ್ತಿದ್ದಾರೆ. ಈಗಾಗಲೇ ಚಿತ್ರೀಕರಣದಲ್ಲೂ ಭಾಗವಹಿಸಿದ್ದಾರೆ.

ಹಾಗಾದರೆ, ಅದಿತಿ ಹಿಂದೆ ಸರಿದಿದ್ದಾದರೂ ಏನಕ್ಕೆ? ಸದ್ಯ ಹಲವು ಪ್ರಾಜೆಕ್ಟ್ಗಳಲ್ಲಿ ಅದಿತಿ ಬಿಜಿ. ಬೇರೆ ಬೇರೆಸ ಸಿನಿಮಾಗಳನ್ನು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಡೇಟ್ಸ್ ವಿಚಾರವಾಗಿ ಸಿನಿಮಾದಿಂದ ನಟಿಸಲು ಒಲ್ಲೆ ಎಂದಿದ್ದಾರೆ. ದೆಹಲಿ ಪ್ರಸಾದ್​ ಈ ಸಿನಿಮಾಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net