

ಬಹುಭಾಷೆಗಳಲ್ಲಿ ಸಿದ್ಧವಾಗುತ್ತಿರುವ ಪ್ರಭಾಸ್ ನಾಯಕತ್ವದ ‘ಆದಿಪುರುಷ್’ ಸಿನಿಮಾ ಒಂದಲ್ಲ ಒಂದು ಕಾರಣಕ್ಕೆ ಸದ್ದು ಮತ್ತು ಸುದ್ದಿ ಮಾಡುತ್ತಿದೆ.
ಇತ್ತೀಚೆಗಷ್ಟೇ ಈ ಚಿತ್ರಕ್ಕೆ ಖಳನಾಗಿ ಸೈಫ್ಅಲಿ ಖಾನ್ ಸೇರ್ಪಡೆಗೊಂಡ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಹೇಳಿಕೊಂಡಿತ್ತು. ಇದೀಗ ನಾಯಕಿ ವಿಚಾರವೂ ಚರ್ಚೆಯಲ್ಲಿದ್ದು, ಕಿಯಾರಾ ಆಡ್ವಾಣಿ ನಾಯಕಿ ಎಂದು ಹೇಳಲಾಗುತ್ತಿದೆ.
ತೆಲುಗು ಮಂದಿಗೆ ಕಿಯಾರಾ ಹೆಸರು ಚಿರಪರಿಚಿತ. ‘ಭರತ್ ಅನೇ ನೇನು’ ಸಿನಿಮಾ ಮೂಲಕ ಟಾಲಿವುಡ್ನಲ್ಲಿ ಖಾತೆ ತೆರೆದಿದ್ದ ಕಿಯಾರಾ, ‘ವಿನಯ ವಿಧೇಯ ರಾಮ’ ಚಿತ್ರದಲ್ಲಿ ರಾಮ್ರಣ್ ತೇಜ ಜತೆಗೂ ನಟಿಸಿದ್ದರು. ಹಾಗಾಗಿ ಚಿತ್ರದ ನಿರ್ವಪಕರು ಕಿಯಾರಾ ಅವರನ್ನೇ ನಾಯಕಿಯನ್ನಾಗಿ ಮಾಡಿಕೊಳ್ಳುವ ಪ್ಲಾನ್ ಹಾಕಿದ್ದಾರಂತೆ. ಈ ನಡುವೆ ಕಿಯಾರಾಗೂ ಮುನ್ನ, ‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್ ಪ್ರಭಾಸ್ಗೆ ಜೋಡಿಯಾಗಲಿದ್ದಾರೆ
ಎಂಬ ಸುದ್ದಿ ಹರಿದಾಡಿತ್ತು. ಪ್ರಭಾಸ್ ರಾಮನಾಗಿ ಕಾಣಿಸಿಕೊಳ್ಳಲಿರುವ ಈ ಚಿತ್ರವನ್ನು ಓಂ ರಾವತ್ ನಿರ್ದೇಶನ ಮಾಡಲಿದ್ದಾರೆ. ಕನ್ನಡದಲ್ಲಿಯೂ ಈ ಸಿನಿಮಾ ಡಬ್ ಆಗಿ ತೆರೆಕಾಣಲಿದೆ. (ಏಜೆನ್ಸೀಸ್)