40ನೇ ವಯಸ್ಸಲ್ಲಿ ಮೂರನೇ ಮದುವೆ!; ಮೂವರು ಮಕ್ಕಳಿರುವ ಈ ನಟಿಯ ಕಥೆ ಇದು..

collage (28)
Published on

ಕಾಲಿವುಡ್​ ಸೇರಿ ತೆಲುಗು ಮತ್ತು ಮಲಯಾಳಂನಲ್ಲಿ ಹೆಸರು ಮಾಡಿರುವ ಹಿರಿಯ ನಟ ವಿಜಯ್​ಕುಮಾರ್ ಮತ್ತು ಮಂಜುಳಾ ದಂಪತಿಯ ಪುತ್ರಿ ವನಿತಾ ವಿಜಯ್​ಕುಮಾರ್​ ಶನಿವಾರ ಮೂರನೇ ಮದುವೆಯಾದರು. ಚೆನ್ನೈನಲ್ಲಿ ಕ್ರಿಶ್ಚಿಯನ್​ ಸಂಪ್ರದಾಯದಂತೆ ಚಿತ್ರ ನಿರ್ದೇಶಕ ಪೀಟರ್​ ಪೌಲ್ ​ಅವರನ್ನು ವನಿತಾ ವರಿಸಿದ್ದು, ಆಯ್ದ ಕೆಲ ಕುಟುಂಬಸ್ಥರು ಈ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಅಂದಹಾಗೆ, ವನಿತಾ 1995ರಲ್ಲಿ ದಳಪತಿ ವಿಜಯ್​ ಜತೆಗೆ ಚಂದ್ರಲೇಖ ಸಿನಿಮಾ ಮೂಲಕ ಕಾಲಿವುಡ್​ನಲ್ಲಿ ಖಾತೆ ತೆರೆದು, ಅದಾದ ಬಳಿಕ ತೆಲುಗು ಮತ್ತು ಮಲಯಾಳಂ ಸಿನಿಮಾಗಳಲ್ಲಿಯೂ ಬಣ್ಣ ಹಚ್ಚಿದರು. ಅಲ್ಲಿಂದ 2015ರ ವರೆಗೆ ಅವರು ಮಾಡಿದ್ದು ಬೆರಳೆಣಿಕೆ ಆರೇ ಸಿನಿಮಾಗಳಾದರೂ, ಸಿನಿಮಾ ಹೊರತುಪಡಿಸಿ ವೈಯಕ್ತಿಯ ವಿಚಾರಗಳಿಂದಲೇ ವನಿತಾ ವಿಜಯ್​ ಕುಮಾರ್ ಖ್ಯಾತಿ ಪಡೆದಿದ್ದಾರೆ.

2000ರಲ್ಲಿ ಕಿರುತೆರೆ ನಟ ಆಕಾಶ್​ ಜತೆ ವನಿತಾ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿಗೆ ಶ್ರೀಹರಿ ಮತ್ತು ಜೋವಿತಾ ಎಂಬ ಇಬ್ಬರು ಮಕ್ಕಳಿದ್ದಾರೆ. ಕಾರಣಾಂತರಗಳಿಂದ ಈ ಜೋಡಿ 2005ರಲ್ಲಿ ಬೇರೆ ಬೇರೆಯಾದರು. ಅದಾದ ಬಳಿಕ 2007ರಲ್ಲಿ ಉದ್ಯಮಿ ಆನಂದ್​ ಜಯ ರಾಜನ್​ ಅವರನ್ನು ವನಿತಾ ವರಿಸಿದ್ದರು. ಇವರಿಬ್ಬರಿಗೆ ಜಯನಿತಾ ಎಂಬ ಪುತ್ರಿ ಇದ್ದಾಳೆ. ಒಂದಷ್ಟು ಕಾರಣಗಳಿಂದ 2012ಕ್ಕೆ ಪರಸ್ಪರರು ವಿಚ್ಛೇದನ ಪಡೆದುಕೊಂಡು ದೂರವಾಗಿದ್ದರು. ಅದಾದ ಬಳಿಕ ಸಿನಿಮಾಗಳಿಂದಲೂ ದೂರ ಉಳಿದಿದ್ದ ವನಿತಾ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡರು. ಬಿಗ್​ಬಾಸ್​ ಸ್ಪರ್ಧಿಯಾಗಿಯೂ ಮನರಂಜನೆ ನೀಡಿದರು.

ಹೀಗಿರುವಾಗಲೇ ಇತ್ತೀಚೆಗಷ್ಟೇ ಪರಿಚಯವಾದ ಪೀಟರ್ ಪೌಲ್​ ವಿಎಫ್​ಎಕ್ಸ್ ತಂತ್ರಜ್ಞನಾಗಿ ಕೆಲಸ ಮಾಡುತ್ತಿದ್ದಾರೆ. ಹಾಲಿವುಡ್​ನಲ್ಲಿಯೂ ಒಂದಷ್ಟು ಸಿನಿಮಾಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸ್ನೇಹ ಪ್ರೀತಿಗೆ ತಿರುಗಿ, ತಮ್ಮ ಮಕ್ಕಳ ಒಪ್ಪಿಗೆ ಪಡೆದೇ ಮೂರನೇ ಮದುವೆಯಾಗುತ್ತಿದ್ದಾರೆ ವನಿತಾ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net