ತಮಿಳಿನ ಕಾಂಟ್ರವರ್ಸಿ ಹೀರೋ ಜತೆ ತ್ರಿಷಾ ಕೃಷ್ಣನ್​ ಮದುವೆ!?

Trisha_bday
Published on

ಬಹುಭಾಷಾ ನಟಿ ತ್ರಿಷಾ ಕೃಷ್ಣನ್​ ಈಗಲೂ ಚೆಂದುಳ್ಳಿ ಚೆಲುವೆ. ಸಾಲು ಸಾಲು ಸಿನಿಮಾ ಅವಕಾಶಗಳನ್ನು ಕೈ ಯಲ್ಲಿ ಹಿಡಿದು ಈಗಲೂ ಬಿಜಿಯೆಸ್ಟ್​ ನಟಿಯಾಗಿದ್ದಾರೆ. ನಟನೆ ಜತೆಗೆ ಮದುವೆ ವಿಚಾರವಾಗಿಯೂ ತ್ರಿಷಾ ಸಾಕಷ್ಟು ಸುದ್ದಿಯಲ್ಲಿದ್ದರು. ಅವರಿವರ ಜತೆ ಡೇಟಿಂಗ್​, ಇನ್ನೊಬ್ಬರ ಜತೆ ಮದುವೆಯಾಗುವುದಾಗಿ ಕಮಿಟ್​ ಆಗಿದ್ದರು.. ಹೀಗೆ ಹಲವು ವದಂತಿಗಳಲ್ಲಿ ತ್ರಿಷಾ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ ಅದೆಲ್ಲದಕ್ಕೂ ಪೂರ್ಣವಿರಾಮ ಇಡುವ ಲೆಕ್ಕಾಚಾರಕ್ಕೆ ಬಂದಿದ್ದಾರಂತೆ ತ್ರಿಷಾ.

ಹಾಗಾದರೆ ಮದುವೆ ಆಗ್ತಾರಾ? ಎಂಬ ಪ್ರಶ್ನೆ ಮೂಡಬಹುದು. ಹೌದು, ತ್ರಿಷಾ ಕರೊನಾ ಲಾಕ್​ಡೌನ್​ ಮುಗಿಯುತ್ತಿದ್ದಂತೆ ಸಪ್ತಪದಿ ತುಳಿಯಲಿದ್ದಾರಂತೆ. ಹಾಗಾದರೆ, ತ್ರಿಷಾ ವರಿಸಲಿರುವ ವರ ಯಾರು? ಆ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. ಕಾಲಿವುಡ್​ನಲ್ಲಿ ಹರಿದಾಡುತ್ತಿರುವ ಕೆಲ ಮೂಲಗಳ ಪ್ರಕಾರ ಕಾಂಟ್ರವರ್ಸಿಯಲ್​ ನಟ ಸಿಂಬು ಅವರನ್ನು ತ್ರಿಷಾ ಮದುವೆಯಾಗಲಿದ್ದಾರೆ ಎನ್ನಲಾಗುತ್ತಿದೆ.

ಈ ಮೊದಲು ರಾನಾ ದಗ್ಗುಬಾಟಿ ಜತೆಗೆ ಡೇಟಿಂಗ್​ನಲ್ಲಿದ್ದ ತ್ರಿಷಾ, ಅವರನ್ನೇ ವರಿಸಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಮಹಿಕಾ ಬಜಾಜ್​ ಎಂಬುವವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು. ಇನ್ನೇನು ಆಗಷ್ಟ್ನಲ್ಲಿ ಈ ಜೋಡಿ ವಿವಾಹವಾಗಲಿದೆ.

ಇತ್ತ ತ್ರಿಷಾ ಸಹ ಸೋಷಿಯಲ್​ ಮೀಡಿಯಾದಲ್ಲಿ ‘ಸಿಂಗಲ್​ ಬಟ್​ ಟೇಕನ್​‘ ಎಂಬ ಸ್ಟೇಟಸ್​ ಹಾಕಿ ಅಭಿಮಾನಿಗಳಲ್ಲಿನ ಕುತೂಹಲ ಮೂಡಿಸಿದ್ದರು. ಅದರಂತೆ ಸಿಂಬು ಅವರ ಜತೆ ತ್ರಿಷಾ ಮದುವೆಯಾಗಲಿದ್ದಾರೆ ಎಂಬ ಸುದ್ದಿ ನಿಜ ಎಂದೇ ಹೇಳಲಾಗುತ್ತಿದೆ. ಇನ್ನೇನಿದ್ದರೂ ಸ್ವತಹ ತ್ರಿಷಾ ಈ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕು.

ಈಗಾಗಲೇ ಏ ಮಾಯೆ ಚೇಸಾವೆ ಸಿನಿಮಾ ಮೂಲಕ ಇತ್ತೀಚೆಗಷ್ಟೇ ಒಂದಾಗಿದ್ದ ಈ ಜೋಡಿ, ಸದ್ಯ ಗೌತಮ್​ ಮೆನನ್​ ಜತೆಗಿನ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net