ನಿರ್ಮಾಪಕಿಯಾದ ತಾಪ್ಸೀ ಪನ್ನು: 'ಬ್ಲರ್​' ನಿರ್ಮಾಣ

Tapsee
Published on

ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವುದು ಬಾಲಿವುಡ್ ನಟ-ನಟಿಯರ ಹಳೆಯ ಖಯಾಲಿ. ಈಗ ತಾಪ್ಸೀ ಪನ್ನು ಸಹ ಆ ಸಾಲಿಗೆ ಸೇರಿದ್ದು, ಔಟ್​ಸೈಡರ್ಸ್ ಫಿಲಂಸ್ ಎಂಬ ನಿರ್ಮಾಣ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. ಈ ಸಂಸ್ಥೆಯ ಮೂಲಕ ‘ಬ್ಲರ್’ ಎಂಬ ಚಿತ್ರವನ್ನು ನಿರ್ವಿುಸುವುದಕ್ಕೆ ಮುಂದಾಗಿದ್ದಾರೆ. ಕೆಲವು ವರ್ಷಗಳ ಹಿಂದೆ ಬಿಡುಗಡೆಯಾಗಿ ಮೆಚ್ಚುಗೆಗೆ ಪಾತ್ರವಾಗಿದ್ದ ‘ಜೂಲಿಯಾಸ್ ಐಸ್’ ಎಂಬ ಸ್ಪಾನಿಶ್ ಚಿತ್ರವನ್ನು ಹಿಂದಿಗೆ ತಾಪ್ಸೀ ರಿಮೇಕ್ ಮಾಡುವುದಕ್ಕೆ ಹೊರಟಿದ್ದಾರೆ.

ಈ ಚಿತ್ರದ ನಿರ್ಮಾಣದಲ್ಲಿ ಜೀ ಸ್ಟುಡಿಯೋಸ್ ಸಹ ಕೈಜೋಡಿಸಿದ್ದು, ಅಜಯ್ ಬೆಹ್ಲ್ ನಿರ್ದೇಶನ ಮಾಡುತ್ತಿದ್ದಾರೆ. ತಾಪ್ಸಿ ಈ ಚಿತ್ರವನ್ನು ನಿರ್ವಿುಸುತ್ತಿರುವುದಕ್ಕೆ ಮುಖ್ಯ ಕಾರಣ ಕಥೆಯಂತೆ. ‘ನಿರ್ವಣ ಮಾಡಬೇಕು ಎನ್ನುವುದು ಹಲವು ವರ್ಷಗಳ ಕನಸು. ಆದರೆ, ಎಂಟ್ರಿಗೆ ಒಂದು ಒಳ್ಳೆಯ ಕಥೆ ಬೇಕಿತ್ತು. ಅಂತಹ ಕಥೆಗಳಿಗೆ ಹುಡುಕುತ್ತಿದ್ದಾಗ ಸಿಕ್ಕಿದ್ದೇ ಈ ಕಥೆ. ಪವನ್ ಸೋನಿ ಮತ್ತು ಅಜಯ್ ಬೆಹ್ಲ್ ಆ ಕಥೆಯನ್ನು ಇಲ್ಲಿನ ಜನರಿಗೆ ಇಷ್ಟವಾಗುವಂತೆ ಇನ್ನೂ ಚೆನ್ನಾಗಿ ರೂಪಿಸಿದ್ದಾರೆ’ ಎಂದಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net