ಹೆಣ್ಮಕ್ಳೇ ಸ್ಟ್ರಾಂಗು ಗುರು | ಫ್ರಂಟ್​ಲೈನ್​ನಲ್ಲಿ ನಾವಿದ್ದೇವೆ: ಸೋನಲ್ ಮೊಂತೆರೋ

Sonal monthero
Published on

ಫ್ರಂಟ್​ಲೈನ್​ನಲ್ಲಿ ನಾವಿದ್ದೇವೆ..

‘ಮಾ.8ರ ಮಹಿಳಾ ದಿನವ ಕೇವಲ ಒಂದೇ ದಿನ ಆಚರಿಸುವಂಥದ್ದಲ್ಲ. ಅದು ನಿತ್ಯದ ಸಂಭ್ರಮ, ಸಡಗರ’- ಹೀಗೆ ಮಹಿಳಾ ದಿನವನ್ನು ಒಂದೇ ದಿನಕ್ಕೆ ಸೀಮಿತ ಮಾಡಬೇಡಿ ಎಂಬುದು ಸಿನಿಮಾ, ಕಿರುತೆರೆ ಮತ್ತು ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡವರ ಮಾತು. ಏಕೆ ಎಂಬುದನ್ನು ಅವರೇ ವಿಜಯವಾಣಿ ಜತೆ ಹೇಳಿಕೊಂಡಿದ್ದಾರೆ..

ಫ್ರಂಟ್​ಲೈನ್​ನಲ್ಲಿ ನಾವಿದ್ದೇವೆ..

ಇಂದಿನ ದಿನಗಳಲ್ಲಿ ಮಹಿಳೆ ಎಲ್ಲ ಕ್ಷೇತ್ರಗಳಲ್ಲಿಯೂ ಗುರುತಿಸಿಕೊಂಡಿದ್ದಾಳೆ. ಸಿನಿಮಾ ಅಂತ ಬಂದರೆ, ಕ್ಯಾಮರಾಮನ್ ಆಗಿಯೂ ಕೈಚಳಕ ತೋರಿಸುತ್ತಿದ್ದಾಳೆ. ಫ್ರಂಟ್​ಲೈನ್​ನಲ್ಲಿ ಮಿಂಚುತ್ತಿದ್ದಾಳೆ. ಹಾಗಾಗಿ ಆಕೆಯ ದಿನವನ್ನು ಒಂದೇ ದಿನಕ್ಕೆ ಸೀಮಿತಗೊಳಿಸುವುದು ಬೇಡ. ದಿನವೂ ಆಚರಣೆ ಮಾಡುವಂತಾಗಬೇಕು. ನಿತ್ಯವೂ ಅದೇ ಗೌರ ನೀಡಬೇಕು. ಒಂದು ಮನೆಯಲ್ಲಿ ಗಂಡುಮಗ ಎಷ್ಟು ಜವಾಬ್ದಾರಿಯಿಂದ ಕೆಲಸ ಮಾಡುತ್ತಾನೋ, ಮಹಿಳೆಯರೂ ಕಮ್ಮಿ ಇಲ್ಲದಂತೆ ಮನೆ ನಡೆಸುತ್ತಿದ್ದಾರೆ. ನಾನು ಚಿಕ್ಕವಳಿದ್ದಾಗಲೇ ಅಪ್ಪನನ್ನು ಕಳೆದುಕೊಂಡಿದ್ದೇನೆ. ನಮ್ಮ ಮನೆಯಲ್ಲಿ ಇರುವವರೆಲ್ಲ ಹೆಣ್ಣುಮಕ್ಕಳೇ. ಅಷ್ಟೇ ಜವಾಬ್ದಾರಿ ಯಿಂದ ಸಂಪೂರ್ಣ ಮನೆ ನಡೆಸುತ್ತಿದ್ದೇವೆ. ಆ ವಿಚಾರಕ್ಕೆ ನಾನು ಹೆಮ್ಮೆಪಡುತ್ತೇನೆ.

| ಸೋನಲ್ ಮೊಂತೆರೋ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net