ಹಾಗಾಗಿ, ತಮ್ಮ ಅನುಯಾಯಿಗಳಿಗೆ ಎಚ್ಚರಿಕೆ ವಹಿಸಿ ಎಂದು ಹೇಳಿದ್ದಾರೆ ನಟಿ. ಇನ್ನು, ನಟಿ ಶ್ರುತಿ ಹರಿಹರನ್ ಈ ರೀತಿ ಸಂದೇಶ ಕೊಟ್ಟ ಕೂಡಲೇ, ನಟಿ ರಮ್ಯಾ ಅವರು ಇದಕ್ಕೆ ಪ್ರತಿಕ್ರಿಯೆ ನೀಡಿದ್ದು ಶ್ರುತಿ ಅವರು ಹೇಳುತ್ತಿರುವುದು ಸತ್ಯ ಎಂದಿದ್ದಾರೆ. ''ನನ್ನ ಖಾತೆಯನ್ನು ಕೂಡ ಹ್ಯಾಕ್ ಮಾಡಲು ಪ್ರಯತ್ನಿಸಲಾಗಿದೆ. ಅದರೆ, ನನ್ನ ಖಾತೆಗೆ ನನಗೆ ಇನ್ನೂ ಕೂಡ ಆ್ಯಕ್ಸಸ್ ಇದೆ. ಎರಡು ಬಾರಿ ವೇರಿಫಿಕೇಷನ್ ಆಗಿದೆ'', ಎಂದು ರಮ್ಯಾ ಹೇಳಿಕೊಂಡಿದ್ದಾರೆ.