ಕರೊನಾ ಮೂರನೇ ಅಲೆ ಕಡಿಮೆ ಆದರೂ, ಸಂಪೂರ್ಣವಾಗಿ ತೊಲಗಿಲ್ಲ. ಇನ್ನು, ಕೆಲವರು ಕರೊನಾ ವೈರಸ್ಗೆ ಪಾಸಿಟಿವ್ ಆಗುತ್ತಿದ್ದಾರೆ. ಇದೀಗ, ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಕೂಡಾ ಕರೊನಾ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಈ ಬಗ್ಗೆ ಸ್ವತಃ ಶ್ರುತಿ ಹಾಸನ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ. ಇನ್ನು, ನಟಿಗೆ ಕರೊನಾ ಪಾಸಿಟಿವ್ ಎಂದು ತಿಳಿದು ಅವರ ಅಭಿಮಾನಿಗಳು ಹೆದರಿದ್ದಾರೆ. ಆದರೆ, ಶ್ರುತಿಗೆ ಯಾವುದೇ ತೊಂದರೆ ಇಲ್ಲ. ನಟಿ ಶ್ರುತಿ, ‘'ಎಲ್ಲರಿಗೂ ನಮಸ್ಕಾರ. ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡ ನಂತರವೂ ಕರೊನಾ ಪಾಸಿಟಿವ್ ಆಗಿದ್ದೇನೆ.