ಪ್ರತಿದಿನ 4 ಲಕ್ಷ ರೂ. ಸಂಪಾದನೆ: ವಿಕಿಪೀಡಿಯಾವೂ ತಪ್ಪು ಹೇಳ್ತಿದೆ ಎಂದು ಕಷ್ಟದ ದಿನಗಳನ್ನು ನೆನೆದ ಶಕೀಲಾ

Shakeela
Published on

ಹೈದರಾಬಾದ್​: ಒಂದು ಕಾಲದಲ್ಲಿ ತಮಿಳು ಮತ್ತು ಮಲಯಾಳಂನ ಸಾಫ್ಟ್​ಕೋರ್​ ನೀಲಿ ಚಿತ್ರಗಳಲ್ಲಿ ನಟಿಸುವ ಮೂಲಕ ಶಕೀಲಾ ಅವರು ದೊಡ್ಡ ದೊಡ್ಡ ನಟರಿಗೆ ಪೈಪೋಟಿ ನೀಡಿದ್ದರು. ಶಕೀಲಾ ಅವರ ಚಿತ್ರ ಬಿಡುಗಡೆಯಾಗುವಾಗ ಸ್ಟಾರ್​ ನಟರ ಚಿತ್ರಗಳೇ ಬದಿಗೆ ಸರಿಯುತ್ತಿದ್ದವು. ಆದರೆ ದಿನ ಕಳೆದಂತೆ ಶಕೀಲಾ ಅವರ ಖ್ಯಾತಿ ಕೂಡ ಕ್ಷೀಣಿಸುತ್ತಾ ಬಂದಿತು.

ಜಯಂ, ಅಳಗಿಯ ತಮಿಳ್​ ಮಗನ್ ಸೇರಿದಂತೆ ಕೆಲವು ಸಿನಿಮಾಗಳಲ್ಲಿಯೂ ಶಕೀಲಾ ನಟಿಸಿದ್ದಾರೆ. ಅಲ್ಲದೆ, ಟಿವಿ ರಿಯಾಲಿಟಿ ಶೋಗಳಲ್ಲಿಯೂ ಭಾಗಿಯಾಗಿದ್ದಾರೆ. ಕನ್ನಡದ ಬಿಗ್​ಬಾಸ್​ ಶೋನಲ್ಲೂ ಶಕೀಲಾ ಅವರು ಕಾಣಿಸಿಕೊಂಡಿದ್ದರು. ಶೋಗಳಲ್ಲಿ ಭಾಗವಹಿಸಿದ ಬಳಿಕ ಅವರ ಖ್ಯಾತಿಯು ಹೆಚ್ಚಾಯಿತು. ಇದೀಗ ಸಂದರ್ಶನವೊಂದರಲ್ಲಿ ಶಕೀಲಾ ಅವರು ತಮ್ಮ ಹಳೆಯ ದಿನಗಳನ್ನು ಮೆಲಕು ಹಾಕಿದ್ದಾರೆ. ಜೀವನದಲ್ಲಿ ತಾವು ಎದರಿಸಿದ ಕಠಿಣ ಕ್ಷಣಗಳನ್ನು ನೆನೆದಿದ್ದಾರೆ.

ಇದ್ಯಾವುದು ವಾಸ್ತವವಲ್ಲ

ನನ್ನ ಬಗ್ಗೆ ಹಲವು ತಪ್ಪು ಮಾಹಿತಿಗಳಿವೆ. ನಾನು ಐಷಾರಾಮಿ ಫ್ಲ್ಯಾಟ್​ ಮತ್ತು ಬಿಎಂಡಬ್ಲ್ಯು ಕಾರನ್ನು ಹೊಂದಿದ್ದೇನೆ ಎಂದು ವಿಕಿಪೀಡಿಯಾ ಪುಟವು ಹೇಳುತ್ತದೆ. ಆದರೆ, ಇದ್ಯಾವುದು ವಾಸ್ತವವಲ್ಲ. ನಾನಿನ್ನೂ ಬಾಡಿಗೆ ಮನೆಯಲ್ಲಿಯೇ ವಾಸಿಸುತ್ತಿದ್ದೇನೆ ಎಂದು ಮೊದಲಿಗೆ ಸ್ಪಷ್ಟನೆ ನೀಡಿದರು.

4 ಲಕ್ಷ ಸಂಪಾದನೆ

ಇದೇ ವೇಳೆ ತಮ್ಮ ಹಿಂದಿನ ದಿನಗಳನ್ನು ನೆನಪಿಸಿಕೊಂಡರು. ವಯಸ್ಕರ ಸಿನಿಮಾಗಳ ಮೂಲಕ ಗಳಿಸಿದ ಹಣವನ್ನು ತನ್ನ ಸಹೋದರಿಗೆ ನೀಡಿದ್ದನ್ನು ಸ್ಮರಿಸಿದರು. ನಾನು ಪ್ರತಿ ದಿನಕ್ಕೆ 4 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಿದ್ದೆ. ಆಗ ಅಷ್ಟೊಂದು ಜನಪ್ರಿಯತೆ ಇತ್ತು. ಆದರೆ, ನನ್ನ ಸಹೋದರಿ ನನ್ನ ಎಲ್ಲ ಹಣವನ್ನು ತೆಗೆದುಕೊಂಡಳು ಮತ್ತು ನನಗಾಗಿ ಏನೂ ಉಳಿಸಲಿಲ್ಲ ಎಂದರು.

ಮಮ್ಮುಟ್ಟಿಗೆ ಅಸಮಾಧಾನ

ಪ್ರಸ್ತುತ ಜನಪ್ರಿಯ ಯೂಟ್ಯೂಬ್ ಚಾನೆಲ್‌ನಲ್ಲಿ ಸಂದರ್ಶನಗಳನ್ನು ಹೋಸ್ಟ್ ಮಾಡುತ್ತಿರುವ ಶಕೀಲಾ, ಇತ್ತೀಚೆಗೆ ಮಾಲಿವುಡ್ ಮೆಗಾಸ್ಟಾರ್ ಮಮ್ಮುಟ್ಟಿ ಅವರು ತನ್ನ ಚಲನಚಿತ್ರ ಬಿಡುಗಡೆ ತಡೆದಿದ್ದರ ಬಗ್ಗೆ ಮಾತನಾಡಿದ್ದರು. ನನ್ನ ಚಿತ್ರಗಳು ಹೆಚ್ಚಾಗಿ ಸಣ್ಣ ಬಜೆಟ್‌ನಲ್ಲಿ ತಯಾರಾಗಿದ್ದರೂ, ಸೂಪರ್‌ಸ್ಟಾರ್‌ಗಳ ಚಲನಚಿತ್ರಗಳಿಗೂ ಕಠಿಣ ಫೈಟ್‌ ನೀಡುತ್ತಿತ್ತು. ಇದು ಮುಮ್ಮಟ್ಟಿ ಅಸಮಾಧಾನಕ್ಕೆ ಕಾರಣವಾಯಿತು. ಆ ಬಳಿಕ ನನ್ನ ಚಿತ್ರಗಳ ಬಿಡುಗಡೆ ಕಠಿಣವಾಯಿತು. ನಾನು ಮಲಯಾಳಂ ಸಿನಿಮಾಗಳಲ್ಲಿ ನಟಿಸುವುದನ್ನು ನಿಲ್ಲಿಸಲು ಇದು ಒಂದು ಕಾರಣವಾಯಿತು ಎಂದು ಹೇಳಿದ್ದರು. ಇದು ಭಾರೀ ಚರ್ಚೆಯಾಗಿತ್ತು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net