ಬೆಂಗಳೂರು: ನಟಿ ಸಂಜನಾ ಗಲ್ರಾನಿ ಅವರು ಈಗ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಮುಂಬರುವ ತಿಂಗಳಲ್ಲಿ ಮಗುಗೆ ಜನ್ಮ ನೀಡಲಿದ್ದಾರೆ ಎನ್ನಲಾಗಿದೆ. ಹಾಗಾಗಿ, ಸದ್ಯಕ್ಕೆ ಅಭಿನಯ ಬಿಟ್ಟು ನಟಿ ಸಂಜನಾ ತಮ್ಮ ಕುಟುಂಬದ ಜತೆಗೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ. ಇನ್ನು, ಇತ್ತೀಚಿನ ದಿನಗಳಲ್ಲಿ ನಟಿ ಕೇವಲ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಸದ್ದು ಮಾಡುತ್ತಿದ್ದಾರೆ. ಚಿತ್ರರಂಗದಲ್ಲಿ, ಡ್ರಗ್ಸ್ ಪ್ರಕರಣ ಎಂಬಂತೆ ತಮ್ಮ ಬದುಕಿನಲ್ಲಿ ಈಗಾಗಲೇ ಸಾಕಷ್ಟು ಏಳು ಬೀಳುಗಳನ್ನು ಕಂಡ ಸಂಜನಾ ಇದೀಗ ಒಂದು ಶಾಕಿಂಗ್ ಕೆಲಸ ಮಾಡಿದ್ದಾರೆ. ಹೌದು, ಈ ಬಾರಿ ಸಂಜನಾ ಅವರು ಕೇವಲ ಒಂದು ಫೋಟೋ ಶೇರ್ ಮಾಡಿಕೊಂಡು ಇಡೀ ಕರುನಾಡ ಗಮನ ಸೆಳೆದಿದ್ದಾರೆ.