ಎಲ್ಲೆಲ್ಲೂ ಹಬ್ಬದ ಸಂಭ್ರಮ: ಅಜ್ಜಿ ಮನೆಯಲ್ಲಿ; ಕುಟುಂಬದವರ ಸಮ್ಮುಖದಲ್ಲಿ

Sanjana
Published on

ಕರೊನಾ ಜಪದಿಂದ ಕ್ರಮೇಣ ಜನ ಹೊರಬರುತ್ತಿದ್ದಾರೆ. ಕ್ರಮೇಣ ಹಬ್ಬದ ಸೀಸನ್​ಗೆ ಅಣಿಯಾಗುತ್ತಿದ್ದಾರೆ. ಮೊದಲ ಹಂತವಾಗಿ, ಗೌರಿ-ಗಣೇಶ ಹಬ್ಬದ ಸಂಭ್ರಮ ಇದೀಗ ಮನೆಮಾಡಿದ್ದು, ಇದಕ್ಕೆ ಕನ್ನಡ ಚಿತ್ರರಂಗ ಸಹ ಹೊರತಾಗಿಲ್ಲ. ಅದರಲ್ಲೂ ಸ್ಯಾಂಡಲ್​ವುಡ್ ನಟಿಯರು ಗೌರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ. ಈ ಬಾರಿಯ ಗೌರಿ ಹಬ್ಬ ಹೇಗಿರಲಿದೆ ಎಂಬುದನ್ನು ಸಂಜನಾ ಆನಂದ್, ವಿಶೇಷವಾಗಿ ‘ವಿಜಯವಾಣಿ’ ಜತೆಗೆ ಹಂಚಿಕೊಂಡಿದ್ದಾರೆ.

ಅಜ್ಜಿ ಮನೆಯಲ್ಲಿ; ಕುಟುಂಬದವರ ಸಮ್ಮುಖದಲ್ಲಿ

ಚಿಕ್ಕಂದಿನಿಂದಲೂ ನಾನು ಆಚರಿಸಿಕೊಂಡು ಬಂದ ಅಚ್ಚುಮೆಚ್ಚಿನ ಹಬ್ಬಗಳಲ್ಲಿ ಗೌರಿ-ಗಣೇಶ ಹಬ್ಬವೂ ಒಂದು. ಇದೀಗ ಕರೊನಾ ಹಿನ್ನೆಲೆಯಲ್ಲಿ ಅದ್ದೂರಿತನಕ್ಕೆ ಕೊಂಚ ಬ್ರೇಕ್ ಬಿದ್ದಿದೆ. ಮನೆಯಲ್ಲಿ ಮಾತ್ರ ಅದೇ ಸಂಭ್ರಮಾಚರಣೆ ಇರಲಿದೆ. ಗೌರಿಗಾಗಿಯೇ ವಿಶೇಷ ಪೂಜೆ, ಗೌರಿಗಾಗಿ ವಿಶೇಷ ನೈವೇದ್ಯ, ವಿಶೇಷ ಅಲಂಕಾರವನ್ನೂ ಮಾಡಲಾಗುತ್ತದೆ. ಆದರೆ, ಈ ಎಲ್ಲ ಆಚರಣೆ ನಮ್ಮ ಮನೆಯಲ್ಲಿ ಇರುವುದಿಲ್ಲ, ಬದಲಿಗೆ ನಮ್ಮ ಅಜ್ಜಿಯ ಮನೆಯಲ್ಲಿ ಈ ಹಬ್ಬವನ್ನು ಕುಟುಂಬದವರೆಲ್ಲ ಸೇರಿಕೊಂಡು ಆಚರಣೆ ಮಾಡುತ್ತೇವೆ. ಎಲ್ಲರೂ ಒಂದೆಡೆ ಕೂಡುವುದೇ ದೊಡ್ಡ ಸಂಭ್ರಮ. ಗರಿಕೆಗಳಿಂದಲೇ ಮಂಟಪ ಸಿದ್ಧಪಡಿಸಿ, ಹೂಗಳಿಂದ ಅಲಂಕಾರ ಮಾಡಿ ಗೌರಿಯನ್ನು ಪೂಜಿಸುತ್ತೇವೆ. ಮನೆಮಂದಿಯೆಲ್ಲ ಹೊಸ ಬಟ್ಟೆ ತೊಡುತ್ತೇವೆ. ಕರೊನಾ ಹಿನ್ನೆಲೆಯಲ್ಲಿ ವಿಡಿಯೋ ಕಾಲ್ ಮೂಲಕವೇ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತೇವೆ.

| ಸಂಜನಾ ಆನಂದ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net