

ಬೆಂಗಳೂರು: ರಮ್ಯಾ ಅದೇನು ಮಾಡಿದರೂ ಸುದ್ದಿಯಾಗುತ್ತದೆ ಎಂಬ ವಿಷಯ ಹೊಸದೇನಲ್ಲ. ಇತ್ತೀಚೆಗೆ ರಮ್ಯಾ ಪುನಃ ಸುದ್ದಿಯಲ್ಲಿದ್ದರು. ಅದಕ್ಕೆ ಕಾರಣ ಯುವಕನ ಜತೆಗೆ ಇರುವ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆತ ಯಾರಿರಬಹುದು? ರಮ್ಯಾ ಜತೆಗೆ ಯಾಕಿರಬಹುದು? ಎಂದು ಸಾಕಷ್ಟು ಪ್ರಶ್ನೆಗಳು ಎದ್ದಿದ್ದವು. ಇದ್ಯಾವ ಪ್ರಶ್ನೆಗಳಿಗೂ ಉತ್ತರ ಬರದ ಕಾರಣ, ಗುಸುಗುಸು ಜೋರಾಗಿತ್ತು.
ಈಗ ಕೊನೆಗೂ ರಮ್ಯಾ ಮಾತಾಡಿದ್ದಾರೆ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, ‘ಆತನ ಹೆಸರು ವಿಹಾನ್. ಅವರು ನನ್ನ ಸ್ಟೈಲಿಸ್ಟ್. ಜನರ ಕುತೂಹಲ ನೋಡಿ ಖುಷಿಯಾಗುತ್ತದೆ’ ಎಂದು ಅವರು ಬರೆದುಕೊಂಡಿದ್ದಾರೆ. ಈ ಮೂಲಕ, ತಮ್ಮ ಬಗ್ಗೆ ಇದ್ದ ಕುತೂಹಲ ಮತ್ತು ಊಹೋಪೋಹಗಳೆಲ್ಲ ಸುಳ್ಳು ಎಂದಿದ್ದಾರೆ.