

ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ನಟಿ ರಮ್ಯಾ ಸಕ್ರಿಯರಾಗಿದ್ದಾರೆ. ಪ್ರಸ್ತುತ ಘಟಾನುವಳಿಗಳಿಗೆ ಟ್ವಿಟರ್ನಲ್ಲಿ ಸ್ಪಂದಿಸುತ್ತಿದ್ದಾರೆ. ಅದರಲ್ಲೂ ಡ್ರಗ್ ಮಾಫಿಯಾ ಶುರುವಾದಾಗಿನಿಂದ ಒಂದಲ್ಲ ಒಂದು ರೀತಿಯ ಹೇಳಿಕೆಗಳನ್ನು ನೀಡುತ್ತಲಿದ್ದಾರೆ. ಇದೀಗ ಮತ್ತದೇ ಡ್ರಗ್ ಮಾಫಿಯಾ ಬಗ್ಗೆ ರಮ್ಯಾ ಮಾತನಾಡಿದ್ದಾರೆ.
ಮುಂಬೈನ ಪತ್ರಕರ್ತೆಯೊಬ್ಬರು ಟ್ವಿಟರ್ನಲ್ಲಿ ಸದ್ಯ ಬಾಲಿವುಡ್ನಲ್ಲಿ ಭುಗಿಲೆದ್ದಿರುವ ಡ್ರಗ್ ಮಾಫಿಯಾ ಬಗ್ಗೆ ಬರೆದುಕೊಂಡಿದ್ದರು. ಎನ್ಸಿಬಿ ಅವರ ಕಣ್ಣಿಗೆ ಬಾಲಿವುಡ್ನಲ್ಲಿನ ಮಹಿಳೆಯರಷ್ಟೇ ಕಾಣಿಸುತ್ತಿದ್ದಾರೆ. ಇನ್ನುಳಿದಂತೆ ನಿರ್ದೇಶಕರು ಮತ್ತು ನಟರು ಪವಿತ್ರ ಹಸುಗಳಾ? ಎಂದು ಪ್ರಶ್ನಿಸಿದ್ದರು.
ಈ ಮೇಲಿನ ಹೇಳಿಕೆಯನ್ನು ರೀ ಟ್ವಿಟ್ ಮಾಡಿಕೊಂಡಿರುವ ರಮ್ಯಾ, ‘ಗಂಡಸು ಸೇದಿದರೆ ಅದು ಶಿವ ಶಂಭೋ, ಅದೇ ಕೆಲಸವನ್ನು ಹೆಣ್ಣು ಮಾಡಿದರೆ, ಧಮ್ ಮಾರೋ ಧಮ್...’ ಎಂದಿದ್ದಾರೆ. ಈ ಮೂಲಕ ಎನ್ಸಿಬಿ ತಂಡದ ತನಿಖೆಯ ಹಾದಿಯನ್ನು ರಮ್ಯಾ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಒಂದೇ ಜಾಗ, ಎರಡೇ ಪಾತ್ರ, ಹೊಸ ಸಿನಿಮಾ …
ಅದೇ ರೀತಿ ಸ್ಯಾಂಡಲ್ವುಡ್ ನಟಿ ಪಾರೂಲ್ ಯಾದವ್ ಸಹ ಕೇವಲ ಹೆಣ್ಣುಮಕ್ಕಳನ್ನೇ ಏಕೆ ಟಾರ್ಗೇಟ್ ಮಾಡಲಾಗುತ್ತಿದೆ. ಈ ಮಾಫಿಯಾದಲ್ಲಿ ಒಬ್ಬೇ ಒಬ್ಬ ಪುರುಷನೂ ಪಾಲ್ಗೊಂಡಿಲ್ಲವಾ? ಆ ವಿಚಾರವನ್ನೇಕೆ ತನಿಖಾ ತಂಡ ಬಯಲು ಮಾಡುತ್ತಿಲ್ಲ’ ಎಂದಿದ್ದಾರೆ.