ರಿಯಲ್ ಹೀರೋಗಳೆಂದರೆ ಇವರೇ; ತುಪ್ಪದ ಬೆಡಗಿ ಹಾಗೆ ಹೇಳಿದ್ದು ಯಾರಿಗೆ?

ragiii
Published on

ಬೆಂಗಳೂರು: ಕರೊನಾ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿದೆ. ಎಲ್ಲರೂ ಮನೆಯಲ್ಲಿದ್ದಾರೆ. ಅಗತ್ಯ ಸೇವೆಗಳ ಅಡಿಯಲ್ಲಿ ಸಾವಿರಾರು ಮಂದಿ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಂಥ ಸೇವಕರಿಗೆ ಕರೆಸಿ ಟೀ ಕೊಟ್ಟು ಉಪಚರಿಸಿದ್ದಾರೆ ಸ್ಯಾಂಡಲ್‌ವುಡ್ ತುಪ್ಪದ ಹುಡುಗಿ. ಹೌದು, ಬೆಂಗಳೂರು ನಗರ ಸ್ವಚ್ಛತೆಯಲ್ಲಿ ದೊಡ್ಡ ಪಾಲುದಾರಿಕೆ ಹೊಂದಿರುವವರು ಬಿಬಿಎಂಪಿ ಪೌರ ಕಾರ್ಮಿಕರು. ಅಂಥ ಕಾರ್ಮಿಕರನ್ನು ಮನೆ ಬಳಿ ಕರೆಸಿ ಅವರಿಗೆ ಟೀ ಕೊಟ್ಟು ಉಪಚರಿಸಿದ್ದಾರೆ. ಒಂದಷ್ಟು ಹೊತ್ತು ಅವರ ಜೀವನದ ಕಥೆ ಕೇಳಿದ್ದಾರೆ. ಬಳಿಕ ರಾಗಿಣಿ ಇಡೀ ಪೌರಕಾರ್ಮಿಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ‘ಪೌರಕಾರ್ಮಿಕರು ಇರುವುದರಿಂದಲೇ ನಾವು ಇಷ್ಟೊಂದು ಸ್ವಚ್ಛ ಪರಿಸರದಲ್ಲಿದ್ದೇವೆ. ನಿಜಕ್ಕೂ ಅವರೆಲ್ಲ ನಿಸ್ವಾರ್ಥಿಗಳು. ತಾವಾಯ್ತು ತಮ್ಮ ಕೆಲಸವಾಯ್ತು ಎಂದಷ್ಟೇ ನಿತ್ಯ ಏನೇ ಬರಲಿ ಕೆಲಸ ಮಾಡಿ ಹೋಗುತ್ತಾರೆ. ನಿಜಕ್ಕೂ ಅವರೇ ನಮ್ಮೆಲರ ನಡುವಿನ ಹೀರೋಗಳು’ ಎಂದಿದ್ದಾರೆ. ಸದ್ಯ ಯಲಹಂಕದ ಮನೆಯಲ್ಲಿ ಕುಟುಂಬದೊಟ್ಟಿಗೆ ರಾಗಿಣಿ ಕಾಲಕಳೆಯುತ್ತಿದ್ದಾರೆ. ಕ್ವಾರಂಟೈನ್ ನಡುವೆಯೂ ಒಮದಷ್ಟು ಸಮಯ ಬಿಡುವು ಮಾಡಕೊಂಡು ಬಂದು ಪೌರಕಾರ್ಮಿಕರ ಜತೆಗೆ ಸಮಯ ಕಳೆದಿದ್ದಾರೆ. ಮತ್ತೆ ಬನ್ನಿ ನಮ್ಮ ಮನೆ ಇದೆ ಎಂದೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net