

ನಟನೆ ಮತ್ತು ಸಂಖ್ಯೆಯ ದೃಷ್ಟಿಯಲ್ಲಿ ಪ್ರಿಯಾಂಕಾ ತಮ್ಮನ್ನು ಓವರ್ಟೇಕ್ ಮಾಡುತ್ತಿದ್ದಾರೆ ಎಂದು ಉಪೇಂದ್ರ ಇತ್ತೀಚೆಗೆ ಒಂದು ಸಮಾರಂಭದಲ್ಲಿ ಹೇಳಿಕೊಂಡಿದ್ದರು. ಅದನ್ನು ಮತ್ತೊಮ್ಮೆ ನಿಜ ಮಾಡಿದ್ದಾರೆ ಪ್ರಿಯಾಂಕಾ. ಇತ್ತೀಚೆಗೆ ಅವರು ಇನ್ನೊಂದು ಹೊಸ ಕ್ರೖೆಮ್ ಥ್ರಿಲ್ಲರ್ ಚಿತ್ರವೊಂದನ್ನು ಒಪ್ಪಿಕೊಂಡಿದ್ದು, ಆ ಚಿತ್ರದ ಮುಹೂರ್ತವಾಗಿದೆ.
ಅಂದಹಾಗೆ, ಈ ಚಿತ್ರದ ಹೆಸರು ‘ಕರ್ತ ಕರ್ಮ ಕ್ರಿಯೆ’. ಈ ಹಿಂದೆ ‘1980’ ಎಂಬ ಚಿತ್ರವನ್ನು ನಿರ್ದೇಶಿಸಿದ್ದ ರಾಜಕಿರಣ್ ಜೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರಕ್ಕೆ ಕಥೆ-ಚಿತ್ರಕಥೆಯೂ ಅವರದ್ದೇ. ಇಲ್ಲಿ ಮಾಡಿದ ತಪ್ಪಿಗೆ ಇಲ್ಲೇ ಶಿಕ್ಷೆ ಅನುಭವಿಸಬೇಕು ಎಂಬುದು ಚಿತ್ರದ ತಾತ್ಪರ್ಯವಂತೆ. ಅದಕ್ಕೆ ಅನುಗುಣವಾಗಿ ಚಿತ್ರಕಥೆ ಮಾಡಲಾಗಿದೆ ಎನ್ನುತ್ತಾರೆ ಅವರು. ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದ್ದು, ಇದೊಂದು ಕ್ರೖೆಮ್ ಥ್ರಿಲ್ಲರ್ ಎಂದು ಚಿತ್ರತಂಡ ಹೇಳಿಕೊಂಡಿದೆ.