

| ಹರ್ಷವರ್ಧನ್ ಬ್ಯಾಡನೂರು
ಆರಡಿ ಮೀರಿದ ಹೀರೋಗಳೇ ಅಪರೂಪ. ಅದೇ ರೀತಿ ಐದೂವರೆ ಅಡಿ ದಾಟಿದ ನಾಯಕಿಯರೂ ಅಪರೂಪ. ಹೀಗಿರುವಾಗ ಕನ್ನಡ ಚಿತ್ರರಂಗಕ್ಕೆ 5.9 ಅಡಿಯಿರುವ ನಟಿ ಎಂಟ್ರಿ ಕೊಡಲು ರೆಡಿಯಾಗಿದ್ದಾರೆ. ದುನಿಯಾ ಸೂರಿ ನಿರ್ದೇಶನದ, ಅಭಿಷೇಕ್ ಅಂಬರೀಶ್, ರಚಿತಾ ರಾಮ್ ನಟಿಸಿರುವ ‘ಬ್ಯಾಡ್ ಮ್ಯಾನರ್ಸ್’ ಚಿತ್ರದ ಮೂಲಕ ಶಿವಮೊಗ್ಗ ಮೂಲದ ಪ್ರಿಯಾಂಕಾ ಕುಮಾರ್ ಸ್ಯಾಂಡಲ್ವುಡ್ಗೆ ಡೆಬ್ಯೂ ಮಾಡುತ್ತಿದ್ದಾರೆ. ವಿಶೇಷ ಅಂದರೆ ಮೊದಲ ಸಿನಿಮಾ ಬಿಡುಗಡೆಗೂ ಮುನ್ನವೇ ಅವರು ಹ್ಯಾಟ್ರಿಕ್ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ಅದೇ ಖುಷಿಯಲ್ಲಿ ಪ್ರಿಯಾಂಕಾ ವಿಜಯವಾಣಿ ಜತೆ ಇತ್ತೀಚೆಗಷ್ಟೆ ಮಾತಿಗೆ ಸಿಕ್ಕಿದ್ದರು.