ಉಡುಪಿಗೆ ನಟಿ ಪೂಜಾ ಹೆಗ್ಡೆ ಭೇಟಿ: ಕಾಪು ಮಾರಿಗುಡಿಯಲ್ಲಿ ವಿಶೇಷ ಪೂಜೆ

Pooja hegde
Published on

ಉಡುಪಿ: ಖ್ಯಾತ ನಟಿ ನಟಿ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಾರಿಗುಡಿಗೆ ಭೇಟಿ ನೀಡಿದ್ದರು. ಮಂಗಳವಾರದ ಶುಭ ದಿನದಂದು ದೇವಿಯ ಸನ್ನಿಧಾನದಲ್ಲಿ ನಡೆಯುವ ಸಾಂಪ್ರದಾಯಿಕ ದರ್ಶನ ಸೇವೆಯಲ್ಲಿ ಭಾಗವಹಿಸಿದ್ದರು.

ಸನ್ನಿಧಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಸೇವೆಯಲ್ಲಿ ಪಾತ್ರಿಗಳಿಂದ ಆಶೀರ್ವಾದ ಪಡೆದರು. ಈ ಹಿಂದೆಯೂ ಮಾರಿಗುಡಿಗೆ ಬಂದಿದ್ದ ಪೂಜಾ ಹೆಗ್ಡೆ ಕ್ಷೇತ್ರದ ಬಗ್ಗೆ ತಮಗಿರುವ ಅಗಾಧ ಭಕ್ತಿ ಹಾಗೂ ಪ್ರೀತಿಯನ್ನು ಈ ವೇಳೆ ವ್ಯಕ್ತಪಡಿಸಿದರು.

ಕುಟುಂಬ ಸದಸ್ಯರೊಂದಿಗೆ ದೇವಾಲಯದ ಅವರಣದಲ್ಲಿ ಕೆಲ ಕಾಲ ಕಳೆದರು. ಬಾಲಿವುಡ್ ಮಾತ್ರವಲ್ಲವೇ ತೆಲುಗು ತಮಿಳು ಸಿನಿಮಾಗಳಲ್ಲಿ ನಟಿಸಿ ಮನೆಮಾತಾಗಿರುವ ಪೂಜಾ ಹೆಗ್ಡೆ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ತಾಲೂಕಿನವರು.

ಭಾರೀ ಯಶಸ್ಸುಕಾಣುತ್ತಿರುವ ಪೂಜಾ ಇತ್ತೀಚೆಗೆ ಬಿಡುಗಡೆಯಾದ ಎರಡು ಸಿನಿಮಾಗಳು ಅಷ್ಟೇನೂ ಯಶಸ್ಸು ಕಾಣದ ಹಿನ್ನಲೆಯಲ್ಲಿ ಉಡುಪಿಗೆ ಭೇಟಿ ನೀಡಿರಬಹುದು ಎಂದೂ ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net