ಕುಟುಂಬದೊಂದಿಗೆ ಈದ್​ ಆಚರಣೆ : ಫೋಟೋ ಹಂಚಿಕೊಂಡ ಕರೀನಾ ಕಪೂರ್​

Kareena
Published on

ಮುಂಬೈ: ಬಾಲಿವುಡ್​ ನಟಿ ಕರೀನಾ ಕಪೂರ್ ಪತಿ ಸೈಫ್​ ಅಲಿ ಖಾನ್​ ತಮ್ಮ ಕುಟುಂಬದ ಜತೆ ಈದ್​ ಆಚರಿಸಿಕೊಂಡಿದ್ದಾರೆ. ಈ ಬಗ್ಗೆ ಫೋಟೋವೊಂದನ್ನು ತಮ್ಮ ಇನ್ಸ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಈ ಬಾರಿಯ ಈದ್​ ಕರೀನಾ ಕಪೂರ್​ ಗೆ ವಿಶೇಷವಾಗಿತ್ತು. ಎರಡನೇ ಪುತ್ರನ ಆಗಮನದಿಂದ ತುಂಬಾ ಖುಷಿಯಾಗಿರುವ ಕರೀನಾ ತಮ್ಮಿಬ್ಬರ ಪುತ್ರರೊಂದಿಗೆ ಈದ್​ ಆಚರಿಸಿದ್ದೇವೆ ಎಂದು ಹೇಳಿಕೊಂಡಿದ್ದಾರೆ.

ತಮ್ಮ ಪುತ್ರರಾದ ತೈಮೂರ್​ ಅಲಿ ಖಾನ್​ ಹಾಗೂ ಜಹಂಗೀರ್​ ಹಾಗೂ ಸೈಫ್​ ಅಲಿ ಖಾನ್​ ಅವರ ಸಹೋದರಿ ಸೋಹಾ ಅಲಿಖಾನ್​ ಪತಿ ಕುನಾಲ್​ ಖೇಮು ಹಾಗೂ ಸಾಬಾ ಜತೆ ಈದ್​ ಆಚರಿಸಿರುವ ಫೋಟೋವನ್ನು ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net