ಮನೇಲಿ ಬಾಡಿ ಸೂಟ್​ ಹಾಕ್ಕೊಂಡು ಓಡಾಡ್ತಿದ್ದೆ: 'ಛೋರೀ' ನಟಿ ನುಸ್ರತ್​

chorii
Published on

ಮುಂಬೈ: 'ಛೋರೀ' ಹಿಂದಿ ಚಿತ್ರದಲ್ಲಿ ಪ್ರಭಾವೀ ನಟನೆಯೊಂದಿಗೆ ಮೆಚ್ಚುಗೆಗೆ ಪಾತ್ರರಾಗಿರುವ ಬಾಲಿವುಡ್​ನ ಯುವತಾರೆ, ನುಸ್ರತ್​ ಬರೂಚ. ಈ ಚಿತ್ರದಲ್ಲಿ ಎಂಟು ತಿಂಗಳ ಗರ್ಭಿಣಿಯ ಪಾತ್ರ ಮಾಡಿರುವ ನುಸ್ರತ್​, ತಾವು ಈವರೆಗೆ ಮಾಡಿದ ಚಿತ್ರಗಳಲ್ಲಿ ಅತ್ಯಂತ ಕ್ಲಿಷ್ಟವಾದ ಚಿತ್ರ ಇದಾಗಿತ್ತು ಎಂದಿದ್ದಾರೆ.

ಇದು ಹೆಣ್ಣುಮಕ್ಕಳ ಹತ್ಯೆಯ ಸಾಮಾಜಿಕ ಪಿಡುಗಿನ ಬಗ್ಗೆ ಹಾರರ್​​​ ಮಿಶ್ರಣ ಮಾಡಿ ತೆಗೆದಿರುವ ಸಸ್ಪೆನ್ಸ್​ ಥ್ರಿಲ್ಲರ್​. 2017ರ ಲಾಪಾಛಪೀ ಚಿತ್ರದ ರೀಮೇಕ್​ ಆಗಿದ್ದರೂ ಆಕರ್ಷಕ ಚಿತ್ರೀಕರಣದೊಂದಿಗೆ ಒಟಿಟಿ ಪ್ರೇಕ್ಷಕರ ಮನ ಗೆದ್ದಿದೆ. ಅಮೇಜಾನ್​ ಪ್ರೈಂನಲ್ಲಿ ನ.26 ಕ್ಕೆ ಬಿಡುಗಡೆಗೊಂಡ ವಿಶಾಲ್​ ಫೂರಿಯಾ ನಿರ್ದೇಶನದ ಈ ಚಿತ್ರದಲ್ಲಿ ನಾಯಕಿ ನುಸ್ರತ್​​ ಮೊದಲಿನಿಂದ ಕೊನೆಯವರೆಗೆ ಕೇಂದ್ರಬಿಂದುವಾಗಿದ್ದಾರೆ.

ಈ ಚಿತ್ರದಲ್ಲಿ ನಟಿಸಲು ತಾವು ಬಹಳಷ್ಟು ತಯಾರಿ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದಾರೆ. "ಗರ್ಭಿಣಿ ಮಹಿಳೆಯ ಪಾತ್ರದಲ್ಲಿ ನಟಿಸುವುದು ತುಂಬಾ ಕಷ್ಟವಾಗಿತ್ತು" ಎಂದಿರುವ ನುಸ್ರತ್​, ಗರ್ಭಿಣಿಯರ ಮ್ಯಾನರಿಸಂಗಳನ್ನು ಮತ್ತು ಪೋಸ್ಚರ್​ಗಳನ್ನು ಅರ್ಥೈಸಿಕೊಳ್ಳಲು ತಾವು ಹಲವು ದಿನ ಮನೆಯಲ್ಲಿ ಬಾಡಿಸೂಟ್​ ಹಾಕಿಕೊಂಡು ಓಡಾಡಿದ್ದಾಗಿ ವಿವರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net