

ಬೆಂಗಳೂರು: ನಟ ಚಿರಂಜೀವಿ ಸರ್ಜಾ ಇಲ್ಲವಾಗಿ 6 ತಿಂಗಳಾಯ್ತು. ಇಂದಿಗೂ ಒಂದಲ್ಲ ಒಂದು ಕಾರಣಕ್ಕೆ ಅಭಿಮಾನಿಗಳು ಅವರನ್ನು ನೆನೆಯುತ್ತಲೇ ಇರುತ್ತಾರೆ. ಇತ್ತೀಚೆಗೆ ಮೇಘನಾಗೆ ಗಂಡು ಮಗು ಹುಟ್ಟಿದ್ದೇ ತಡ, ಅಭಿಮಾನಿ ವಲಯದಲ್ಲಿ ಸಂಭ್ರಮ ಮನೆ ಮಾಡಿತ್ತು. ಇದೀಗ ಇಲ್ಲೊಬ್ಬ ಅಭಿಮಾನಿ ತಮ್ಮ ಕಲೆಯಿಂದಲೇ ಚಿರಂಜೀವಿಯನ್ನು ನೆನಪು ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ಹೊಸ ಚಿತ್ರದ ಸಿದ್ಧತೆಯಲ್ಲಿ ಕೆ. ಮಂಜು ಮಗ ಶ್ರೇಯಸ್
ವಿಶೇಷ ಏನೆಂದರೆ, ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಅಪ್ಪಟ ಅಭಿಮಾನಿಯಾಗಿರುವ ಚಾನ್ ಆರ್ಟ್ಸ್ ಎಂಬುವವರು ಮೇಘನಾ ಹೆಸರನ್ನೇ ಬಳಸಿಕೊಂಡು, ಚಿರು ಸರ್ಜಾ ಅವರ ಚಿತ್ರಬಿಡಿಸಿದ್ದಾರೆ. ಸದ್ಯ ಆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸ್ವತಃ ಮೇಘನಾ ಸಹ ಆ ಚಿತ್ರ ನೋಡಿ ಫಿದಾ ಆಗಿದ್ದಾರೆ.
ಅಭಿಮಾನಿಯ ಈ ಕುಸುರಿ ಕೆಲಸವನ್ನು ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡು, ಅವರ ಅಭಿಮಾನಕ್ಕೆಹೃದಯದಿಂದ ಧನ್ಯವಾದ ಹೇಳಿದ್ದಾರೆ. ಸದ್ಯ ಜೂ. ಚಿರು ಆರೈಕೆಯಲ್ಲಿ ಸಮಯ ಕಳೆಯುತ್ತಿರುವ ಮೇಘನಾ, ಶೀಘ್ರದಲ್ಲಿಯೇ ಪುತ್ರನ ಹೆಸರನ್ನೂ ಬಹಿರಂಗಪಡಿಸಲಿದ್ದಾರಂತೆ.