

ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ಮೇಘನಾ ಗಾಂವ್ಕರ್ ಇಳಕಲ್ ಸೀರೆಯುಟ್ಟು ರೀಲ್ಸ್ ಮಾಡಿಕೊಂಡಿದ್ದು, ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದು, ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಸೀರೆಗೆ ಹೊಂದುವಂತಹ ಆಭರಣವನ್ನೂ ಧರಿಸಿಕೊಂಡಿರುವ ಮೇಘನಾ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಶೈಲಿಯಲ್ಲಿ ಮಿಂಚಿದ್ದಾರೆ.
ಇಳಕಲ್ ಸೀರೆಯುಟ್ಟು ಹಳ್ಳಿ ಸೊಗಡಿನಲ್ಲಿ ಮಿಂಚಿರುವ ಮೇಘನಾ ಗಾಂವ್ಕರ್, ಬೆಂಗಳೂರಿನ ಕೊತ್ನೂರು ಸಮೀಪದ ಗೊಟ್ಟಿಗೆರೆ ಕೆರೆ ದಡದಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚಾರ್ ಮಿನಾರ್ ಬೆಡಗಿಯ ಲುಕ್‌ಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ.
'ಸೀರೆಯ ಬಗ್ಗೆ ನನ್ನ ಮೊದಲ ನೆನೆಪು ತಾಯಿಯಿಂದ ಆರಂಭವಾಗುತ್ತದೆ. ಅವಳು ಕರಕುಶಲತೆಯಿಂದ ಮಾಡಿದ ಚಿನ್ನದ ಆಭರಣಗಳೊಂದಿಗೆ ಸಾಂಪ್ರದಾಯಿಕ ದಕ್ಷಿಣ ಭಾರತದ ರೇಷ್ಮೆ ಸೀರೆ ಉಟ್ಟಿದ್ದು ಇಂದಿಗೂ ನನಗೆ ಸ್ಪಷ್ಟವಾಗಿ ನೆನಪಿದೆ. ಚಿನ್ನದ ಜುಮ್ಕಿ, ಚಿನ್ನದ ನೆಕ್ಲೇಸ್, ಆಕರ್ಷಕ ಬಳೆ, ತಾಜಾ ಮಲ್ಲಿಗೆ ಹೂವು ಮತ್ತು ಸರಳವಾದ ಬಿಂದಿಯೊಂದಿಗೆ ಸೀರೆಯುಟ್ಟು ಅವಳು ಸುಂದರವಾಗಿ ಕಾಣುತ್ತಿದ್ದಳು' ಎಂದು ಇಳಕಲ್ ಸೀರೆಯುಟ್ಟ ಸಂಭ್ರಮದ ಬಗ್ಗೆ ಮೇಘನಾ ಗಾಂವ್ಕರ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.