ದೀಪಾವಳಿ ಹಬ್ಬದಂದು ಸಿಹಿಸುದ್ದಿ ಹಂಚಿಕೊಂಡ ಮಯೂರಿ

Mayuri Kyatari - Final
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟಿ ಮಯೂರಿ ಶನಿವಾರ ಬೆಳಿಗ್ಗೆ ದೀಪಾವಳಿ ಹಬ್ಬದಂದು ಸಿಹಿಸುದ್ದಿಯೊಂದನ್ನು ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ತಾವು ಗರ್ಭಿಣಿಯಾಗಿರುವ ವಿಚಾರವನ್ನು ಹೇಳಿಕೊಂಡಿರುವ ಅವರು ಸದ್ಯದಲ್ಲೇ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಕೆಲವು ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ.

ಮಯೂರಿ ಕನ್ನಡ ಚಿತ್ರರಂಗಕ್ಕೆ ಪರಿಚಿತರಾಗಿದ್ದು ಅಜೇಯ್​ ರಾವ್ ನಿರ್ದೇಶನದ 'ಕೃಷ್ಣ-ಲೀಲಾ' ಚಿತ್ರದ ಮೂಲಕ. ಅದಕ್ಕೂ ಮುನ್ನ ಕಲರ್ಸ್​ ಕನ್ನಡದಲ್ಲಿ ಪ್ರಸಾರವಾದ 'ಅಶ್ವಿನಿ ನಕ್ಷತ್ರ' ಧಾರಾವಾಹಿ ಮೂಲಕ ಹೆಸರು ಮಾಡಿದ ಅವರು ನಂತರದ ದಿನಗಳಲ್ಲಿ ಚಿತ್ರರಂಗಕ್ಕೆ ಬಂದರು.

'ಇಷ್ಟಕಾಮ್ಯ', 'ನಟರಾಜ ಸರ್ವೀಸ್​', 'ಕರಿಯ 2', '8 ಎಂಎಂ', 'ನನ್ನ ಪ್ರಕಾರ' ಮುಂತಾದ ಚಿತ್ರಗಳಲ್ಲಿ ನಟಿಸಿರುವ ಮಯೂರಿ, ಜೂನ್​ 12ರಂದು ತಮ್ಮ ಬಹುಕಾಲದ ಸ್ನೇಹಿತ ಅರುಣ್ ಅವರೊಂದಿಗೆ ಸಪ್ತಪದಿ ತುಳಿದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net