ಟಗರು ಸಿನಿಮಾ ನಟಿ ಮಾನ್ವಿತಾ ಕಾಮತ್ ತಾಯಿ ನಿಧನ

Manvitha Kamath
Published on

ಬೆಂಗಳೂರು: ಕೆಂಡಸಂಪಿಗೆ, ಟಗರು ಸಿನಿಮಾ ಖ್ಯಾತಿಯ ನಟಿ ಮನ್ವಿತಾ ಕಾಮತ್ ಅವರ ತಾಯಿ ಸುಜಾತಾ ಕಾಮತ್ ಅವರು ನಿಧನರಾಗಿದ್ದಾರೆ. ಸುಜಾತಾ ಕಾಮತ್ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಮಾನ್ವಿತಾ ತಾಯಿ ಸುಜಾತಾ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಕಿಡ್ನಿ ಕಸಿ ಮಾಡಿಸಲಾಗಿತ್ತು. ಅಲ್ಲದೆ ಈ ಹಿಂದೆ ಎರಡು ಬಾರಿ ಹೃದಯಾಘಾತಕ್ಕೆ ಒಳಗಾಗಿದ್ದರು. ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರಿಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಮಾನ್ವಿತಾ ಅವರ ತಾಯಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಸಹಾಯ ಹಸ್ತ ಚಾಚಿದ್ದ ಚಿತ್ರರಂಗ

ಕಳೆದ ವರ್ಷ ಮಾನ್ವಿತಾ ತಾಯಿ ಸಾಕಷ್ಟು ಬಾರಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ವೇಳೆ ಮಾನ್ವಿತಾ ಟ್ವೀಟ್ ಮುಖಾಂತರ, ಸಹಾಯ ಮಾಡಿದ್ದ ಚಿತ್ರರಂಗದ ಮಂದಿಗೆ ಧನ್ಯವಾದ ತಿಳಿಸಿದ್ದರು. ನಿರ್ಮಾಪಕ ಕೆಪಿ ಶ್ರೀಕಾಂತ್, ನಟ ಪ್ರೇಮ್, ಸೋನು ಸೂದ್ ಮುಂತಾದವರು ಸಹಾಯ ಮಾಡಿದ್ದರು. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net