ಎವಿಡೆನ್ಸ್ ಹುಡುಕುತ್ತಿರುವ ಮಾನಸ; ಕೈಮ್ ಥ್ರಿಲ್ಲರ್​ನಲ್ಲಿ ತನಿಖಾಧಿಕಾರಿ ಆಗಿ ನಟನೆ

Manasa Joshi
Published on

ಬೆಂಗಳೂರು: ‘ಅಮೃತ ಅಪಾರ್ಟ್​ವೆುಂಟ್ಸ್’ ನಂತರ ಮಾನಸ ಜೋಷಿ ಅಭಿನಯದ ಯಾವೊಂದು ಚಿತ್ರ ಸಹ ಬಿಡುಗಡೆಯಾಗಿರಲಿಲ್ಲ. ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ ಅವರು, ಈಗ ಇನ್ನೊಂದು ಚಿತ್ರದಲ್ಲೂ ತನಿಖಾಧಿಕಾರಿಯಾಗಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಅದೇ ‘ಎವಿಡೆನ್ಸ್’.

ಪ್ರವೀಣ್ ರಾಮಕೃಷ್ಣ ನಿರ್ದೇಶನದ ‘ಎವಿಡೆನ್ಸ್’ ಚಿತ್ರದ ಚಿತ್ರೀಕರಣ ಕೆಲವು ದಿನಗಳ ಹಿಂದೆಯೇ ಮುಗಿದು, ಇದೀಗ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಸದ್ಯದಲ್ಲೇ ಚಿತ್ರದ ಟ್ರೖೆಲರ್ ಬಿಡುಗಡೆಯಾಗಲಿದ್ದು, ಡಿಸೆಂಬರ್​ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ. ಇದೊಂದು ಕ್ರೖೆಮ್ ಥ್ರಿಲ್ಲರ್ ಚಿತ್ರವಾಗಿದ್ದು, ತ್ರಿಕೋನ ಪ್ರೇಮಕಥೆಯೂ ಇದೆಯಂತೆ. ಈ ಚಿತ್ರಕ್ಕೆ ನಿರ್ದೇಶಕರೇ ಕಥೆ, ಚಿತ್ರಕಥೆ ಬರೆದಿದ್ದಾರೆ.

ಈಗಾಗಲೇ ಬೆಂಗಳೂರು, ಮಂಗಳೂರು, ಚಿಕ್ಕಮಗಳೂರು ಮುಂತಾದ ಕಡೆ ಚಿತ್ರೀಕರಣ ಮಾಡಲಾಗಿದೆ. ಮಾನಸಾ ಜತೆಗೆ ರೋಬೋ ಗಣೇಶ್ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಮಿಕ್ಕಂತೆ ಆದಿತ್ಯ, ರಚಿತಾ, ಪೂಜಿತಾ, ಪವನ್ ಸುರೇಶ್ ಮುಂತಾದವರು ನಟಿಸಿದ್ದಾರೆ. ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜಿಸಿದ್ದು, ರವಿ ಸುವರ್ಣ ಅವರ ಛಾಯಾಗ್ರಹಣವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net