ನಟಿ ಮಧುಬಾಲ ಪುತ್ರಿಯರ ಫೋಟೋ ವೈರಲ್​: ಅಮ್ಮನನ್ನೇ ಮೀರಿಸುವ ಸೌಂದರ್ಯ ಎಂದ ನೆಟ್ಟಿಗರು! Actress Madhubala

Actress Madhubala
Published on

Actress Madhubala : ಅಣ್ಣಯ್ಯ ಸಿನಿಮಾದಲ್ಲಿ ರವಿಚಂದ್ರನ್​ ಅವರಿಗೆ ನಾಯಕಿಯಾಗಿ, ರನ್ನ ಚಿತ್ರದಲ್ಲಿ ಕಿಚ್ಚ ಸುದೀಪ್​ ಅವರ ಅತ್ತೆಯಾಗಿ ನಟಿಸುವ ಮೂಲಕ ಕನ್ನಡಿಗರಿಗೆ ಪರಿಚಿತರಾಗಿರುವ ನಟಿ ಮಧುಬಾಲ, ತುಂಬಾ ಗ್ಯಾಪ್​ ಬಳಿಕ ಮತ್ತೆ ಚಿತ್ರರಂಗದಲ್ಲಿ ಬಿಜಿಯಾಗಿದ್ದಾರೆ.

ಕನ್ನಡದಲ್ಲಿ ಬೆರಳಣಿಕೆ ಚಿತ್ರದಲ್ಲಿ ನಟಿಸಿದರೂ ಕೂಡ ತಮ್ಮ ಅಭಿನಯ ಮತ್ತು ಸಹಜ ಸೌಂದರ್ಯದಿಂದಲೇ ಮಧುಬಾಲ ತಮ್ಮದೇಯಾದ ಛಾಪು ಮೂಡಿಸಿದ್ದಾರೆ. ರನ್ನ ಚಿತ್ರದಲ್ಲಿನ ಅತ್ತೆಯ ಪಾತ್ರವಂತೂ ಎಂದಿಗೂ ಮರೆಯುವಂತಿಲ್ಲ.

ಕನ್ನಡಕ್ಕಿಂತ ಹಿಂದಿ, ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚು ನಟಿಸಿದ್ದಾರೆ. ಸಿನಿಮಾ ಕೆರಿಯರ್​ನ ಉತ್ತುಂಗದಲ್ಲಿರುವಾಗಲೇ ಉದ್ಯಮಿ ಆನಂದ್​ ಎಂಬುವರನ್ನು ಮದುವೆಯಾಗಿ ಜೀವನದಲ್ಲಿ ಸೆಟಲ್​ ಆದರು. ತುಂಬಾ ವರ್ಷಗಳ ಬಳಿಕ ಸಿನಿಮಾ ರಂಗಕ್ಕೆ ಕಂಬ್ಯಾಕ್​ ಮಾಡಿದ್ದು, ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ.

ತಾಜಾ ಸಂಗತಿ ಏನೆಂದರೆ, ನಟಿ ಮಧುಬಾಲ ಪುತ್ರಿಯರ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿವೆ. ಮಧುಬಾಲ ಅವರಿಗೆ ಇಬ್ಬರು ಸುಂದರ ಹೆಣ್ಣು ಮಕ್ಕಳಿದ್ದಾರೆ. ಅವರು ಹೆಸರು ಕೀಯಾ ಶಾ ಮತ್ತು ಅಮೇಯಾ ಶಾ. ಇಬ್ಬರಲ್ಲಿ ಒಬ್ಬರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಬಹುದು ಎಂದು ಹೇಳಲಾಗುತ್ತಿದೆ.

Actress Madhubala 1

ಅಂದಹಾಗೆ, ತಮ್ಮ ಬ್ಯೂಟಿಯಿಂದಲೇ ಮಧುಬಾಲ ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡಿದರು. ಇದೀಗ ಅವರ ಪುತ್ರಿಯರು ಕೂಡ ಅಮ್ಮನನ್ನೇ ಮೀರಿಸುವ ಬ್ಯೂಟಿಯನ್ನು ಹೊಂದಿದ್ದಾರೆ. ವೈರಲ್​ ಆಗುತ್ತಿರುವ ಫೋಟೋಗಳನ್ನು ನೋಡಿದ ಅಭಿಮಾನಿಗಳು, ಮಧುಬಾಲಾ ಅವರಿಗೆ ಇಷ್ಟು ದೊಡ್ಡ ಮಕ್ಕಳಿದ್ದಾರಾ ಎಂದು ಹುಬ್ಬೇರಿಸಿದ್ದಾರೆ.

ಮಧುಬಾಲ ಅವರು ಇಂದಿಗೂ ಯುವತಿಯಂತೆ ಕಂಗೊಳ್ಳಿಸುತ್ತಾರೆ. ಹೀಗಿರುವಾಗ ಅವರ ಹೆಣ್ಣು ಮಕ್ಕಳಿಬ್ಬರು ದೊಡ್ಡವರಾಗಿರುವುದರಿಂದ ಫ್ಯಾನ್ಸ್​ ಹುಬ್ಬೇರಿಸಿದ್ದಾರೆ. ಇಬ್ಬರು ಹೆಣ್ಣು ಮಕ್ಕಳು ಅಮ್ಮನನ್ನೇ ಮೀರಿಸುವ ಬ್ಯೂಟಿ ಹೊಂದಿದ್ದಾರೆ. ಚಿತ್ರರಂಗಕ್ಕೆ ಬರುವುದು ಖಚಿತ. ಒಂದು ಸಿನಿಮಾಗೆ ಎಂಟ್ರಿ ಕೊಟ್ಟರೆ ತಮ್ಮ ಸೌಂದರ್ಯದಿಂದಲೇ ಎಲ್ಲರನ್ನೂ ಮೋಡಿ ಮಾಡುತ್ತಾರೆ ಎಂದು ಕಾಮೆಂಟ್​ ಮೂಲಕ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್​)

Actress Madhubala 4
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net