ನಟಿ ಕೃತಿ ಶೆಟ್ಟಿ ಕೈಯಲ್ಲಿ ಇನ್ನೆರಡು ಸಿನಿಮಾ!

Krithi Shetty
Published on

‘ಉಪ್ಪೆನಾ’ ನಂತರ ಮೂರು ತೆಲುಗು ಚಿತ್ರಗಳನ್ನು ಒಪ್ಪಿಕೊಳ್ಳುವ ಮೂಲಕ ಟಾಲಿವುಡ್​ನ ಬಿಜಿ ನಟಿಯಾಗಿದ್ದ ಕನ್ನಡದ ಕೃತಿ ಶೆಟ್ಟಿ, ಈಗ ಇನ್ನೂ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿರುವ ಸುದ್ದಿ ಫ್ರೆಶ್ ಆಗಿ ಬಂದಿದೆ. ಈ ಪೈಕಿ ‘ಸೊಗ್ಗಾಡೆ ಚಿನ್ನ ನಾಯನ’ ಚಿತ್ರದ ಸೀಕ್ವೆಲ್ ಆಗಿರುವ ‘ಬಂಗಾರುರಾಜು’ ಪ್ರಮುಖವಾದದ್ದು. ಮೊದಲ ಚಿತ್ರದಲ್ಲಿ ನಾಗಾರ್ಜುನ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಮುಂದುವರೆದ ಭಾಗದಲ್ಲಿ ನಾಗಾರ್ಜುನ ಮಗ ನಾಗಚೈತನ್ಯ ನಾಯಕನಾಗಿ ನಟಿಸುತ್ತಿದ್ದು, ಅವರಿಗೆ ನಾಯಕಿ ಯಾಗಿ ಕೃತಿ ಕಾಣಿಸಿಕೊಳ್ಳುತ್ತಿದ್ದಾರಂತೆ.

ಇದಲ್ಲದೆ ಎಸ್.ಆರ್. ಶೇಖರ್ ನಿರ್ದೇಶನದ ಇನ್ನೊಂದು ಹೊಸ ಚಿತ್ರದಲ್ಲಿ ನಿತಿನ್​ಗೆ ಜೋಡಿಯಾಗಿದ್ದಾರೆ ಕೃತಿ. ಈ ಎರಡೂ ಚಿತ್ರಗಳ ಚಿತ್ರೀಕರಣ ಪ್ರಾರಂಭವಾಗುವುದಕ್ಕೆ ಇನ್ನಷ್ಟು ಸಮಯವಿದೆ. ಸದ್ಯ, ರಾಮ್ ಪೋತಿನೇನಿ ಅಭಿನಯದ ಚಿತ್ರೀಕರಣವು ರಾಮೋಜಿ ಫಿಲಂ ಸಿಟಿಯಲ್ಲಿ ನಡೆಯುತ್ತಿದ್ದು, ಈ ಚಿತ್ರೀಕರಣದಲ್ಲಿ ಕೃತಿ ತೊಡಗಿಸಿಕೊಂಡಿದ್ದಾರೆ. ಇದನ್ನು ಮುಗಿಸಿದ ನಂತರ ಸುಧೀರ್ ಬಾಬು ಅಭಿನಯದ ‘ಆ ಅಮ್ಮಾಯಿ ಗುರಿಂಚಿ ಮೀಕು ಚಪ್ಪಾಲಿ’ ಚಿತ್ರವಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net