

ಟಾಲಿವುಡ್ನಲ್ಲಿ ಸದ್ಯ ಕನ್ನಡತಿಯರದ್ದೇ ಹವಾ. ಈಗಾಗಲೇ ರಶ್ಮಿಕಾ ಸ್ಟಾರ್ ನಟಿಯಾಗಿದ್ದಾರೆ. ನಭಾ ನಟೇಶ್ ಸಹ ಹಲವು ಬಿಗ್ ಪ್ರಾಜೆಕ್ಟ್ಗಳನ್ನು ಕೈವಶ ಮಾಡಿಕೊಂಡಿದ್ದಾರೆ. ಇದೀಗ ಅದೇ ಹಾದಿಯಲ್ಲಿ ಸಾಗುತ್ತಿದ್ದಾರೆ ಮಂಗಳೂರು ಮೂಲದ ನಟಿ ಕೃತಿ ಶೆಟ್ಟಿ. ತೆಲುಗಿನ ಸ್ಟಾರ್ ನಟ ನಾಣಿ ನಟನೆಯ ‘ಶ್ಯಾಮ್ ಸಿಂಗ್ ರಾಯ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ಈ ಚಿತ್ರದಲ್ಲಿ ಸಾಯಿಪಲ್ಲವಿ, ಮಡೋನಾ ಸೆಬಾಸ್ಟಿನ್ ಜತೆಗೆ ಕೃತಿ ಸಹ ನಟಿಸಿದ್ದಾರೆ.
ಇನ್ನೇನು ಡಿ. 24ರಂದು ತೆಲುಗು, ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ಚಿತ್ರ ತೆರೆಗೆ ಬರುತ್ತಿದೆ. ಈ ಚಿತ್ರದ ಮೂಲಕ ಸೌತ್ನಲ್ಲಿ ಗುರುತಿಸಿಕೊಂಡಿದ್ದ ನಟಿ, ಪ್ಯಾನ್ ಇಂಡಿಯಾ ನಾಯಕಿಯಾಗಲಿದ್ದಾರೆ. ರಾಹುಲ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರವನ್ನು ನಿಹಾರಿಕಾ ಎಂಟರ್ಪ್ರೖೆಸಿಸ್ ನಿರ್ಮಾಣ ಮಾಡಿದೆ. ಈ ಸಿನಿಮಾ ಹೊರತುಪಡಿಸಿ ನಾಗಾರ್ಜುನ್ ಜತೆ ‘ಬಂಗಾರಾ›ಜು’, ನಿತಿನ್ ನಟಿಸುತ್ತಿರುವ ಹೊಸ ಸಿನಿಮಾ ಮತ್ತು ತಮಿಳಿನ ಚಿತ್ರವೊಂದರಲ್ಲಿಯೂ ಕೃತಿ ನಟಿಸುತ್ತಿದ್ದಾರೆ. -ಏಜೆನ್ಸೀಸ್