ನಟ ಅಮಿತಾಭ್ ಬಚ್ಚನ್ ಮನೆಯಲ್ಲಿ ಕೃತಿ ಸನೋನ್​ ವಾಸ್ತವ್ಯ!

Bachchan
Published on

ಬಾಲಿವುಡ್ ಸಿನಿಮಾ ಮಂದಿ ಒಂದಿಲ್ಲೊಂದು ವಿಚಾರಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಮನೆ ಖರೀದಿಸಿದರೂ ಸುದ್ದಿ, ಮನೆ ಬಿಟ್ಟರೂ ಸುದ್ದಿಯಾಗುತ್ತದೆ. ಇದೀಗ ಕೃತಿ ಸನೋನ್ ಬಾಡಿಗೆ ಮನೆ ಪಡೆದ ವಿಚಾರ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿದೆ. ಅರೇ ಮನೆ ಬಾಡಿಗೆ ಪಡೆದರೆ ಅದರಲ್ಲೇನು ವಿಶೇಷ... ಎಂದೆನಿಸಬಹುದು. ಆದರೆ, ವಿಷಯ ಇರುವುದೇ ಇಲ್ಲಿ. ಕೃತಿ ಬಾಡಿಗೆ ಪಡೆದ ಮನೆ ಬಿಗ್ ಬಿ ಅಮಿತಾಭ್ ಬಚ್ಚನ್ ಅವರದ್ದು!

ಮುಂಬೈನ ಹಲವೆಡೆಗಳಲ್ಲಿ ಅಮಿತಾಭ್ ಒಡೆತನದ ಹಲವು ಐಷಾರಾಮಿ ಮನೆಗಳಿವೆ. ತಿಂಗಳಿಗೆ ಏನಿಲ್ಲವೆಂದರೂ ಲಕ್ಷಾಂತರ ರೂ. ಬಾಡಿಗೆ ರೂಪದಲ್ಲಿ ಸಂದಾಯವಾಗುತ್ತದೆ. ಇತ್ತ ಕಳೆದ ಕೆಲ ತಿಂಗಳಿಂದ ಒಂದೊಳ್ಳೆ ಮನೆಯ ಹುಡುಕಾಟದಲ್ಲಿದ್ದ ಕೃತಿ, ಕೊನೆಗೂ ಮನೆಯನ್ನು ಅಂತಿಮ ಮಾಡಿದ್ದಾರೆ. ಅಂಧೇರಿಯಲ್ಲಿರುವ ಬಿಗ್​ಬಿ ಅವರ ಡುಪ್ಲೆಕ್ಸ್ ಮನೆ ಬಾಡಿಗೆ ಪಡೆದಿದ್ದಾರೆ. ಇನ್ನೇನು ಶೀಘ್ರದಲ್ಲಿ ಹೊಸ ಮನೆ ಪ್ರವೇಶಿಸಲಿದ್ದಾರಂತೆ ಕೃತಿ. ಹಾಗಾದರೆ, ಆ ಮನೆಯ ಬಾಡಿಗೆ ಎಷ್ಟು? ಸದ್ಯಕ್ಕೆ ಆ ವಿಚಾರ ಹೊರಬಿದ್ದಿಲ್ಲ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net