ಕೀರ್ತಿ ಮದುವೆ ಸದ್ಯಕ್ಕಿಲ್ಲ

keerti
Published on

‘ಮಹಾನಟಿ’ ಖ್ಯಾತಿಯ ಕೀರ್ತಿ ಸುರೇಶ್, ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದರ್ ಅವರನ್ನು ಮದುವೆಯಾಗುತ್ತಿದ್ದಾರೆ ಎಂಬ ವಿಷಯ ಕೆಲವು ದಿನಗಳಿಂದ ಕೇಳಿಬರುತ್ತಲೇ ಇದೆ. ಅವರಿಬ್ಬರೂ ಜತೆಯಾಗಿರುವ ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಅದೇ ಈ ಮದುವೆ ಸುದ್ದಿಗೆ ಮೂಲ ಕಾರಣ ಎಂದರೆ ತಪ್ಪಿಲ್ಲ. ಕೀರ್ತಿ ಮದುವೆ ವಿಷಯ ಸುದ್ದಿಯಾಗುತ್ತಿರುವುದು ಇದು ಮೊದಲೇನಲ್ಲ. ಈ ಹಿಂದೆ ಸಹ ಒಂದೆರೆಡು ಬಾರಿ ಸುದ್ದಿಗಳು ಹಬ್ಬಿದ್ದವು. ಅದಕ್ಕೆ ಕೀರ್ತಿ ಸ್ಪಷ್ಟೀಕರಣ ಕೊಟ್ಟಿದ್ದೂ ಆಗಿತ್ತು. ಈ ಬಾರಿ ಮತ್ತೊಮ್ಮೆ ಇಂಥದ್ದೊಂದು ವದಂತಿ ಹಬ್ಬಿದ್ದು, ಈ ವಿಷಯವನ್ನು ಕೀರ್ತಿ ಅವರ ತಂದೆ ಸುರೇಶ್ ಅಲ್ಲಗೆಳೆದಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ‘ಕೀರ್ತಿ ಮದುವೆ ಬಗ್ಗೆ ಹಬ್ಬಿರುವ ಸುದ್ದಿ ಸುಳ್ಳು ಮತ್ತು ಸತ್ಯಕ್ಕೆ ದೂರವಾಗಿದ್ದು. ಇದು ಮೊದಲಲ್ಲ, ಮೂರನೇ ಬಾರಿ ಕೀರ್ತಿ ಮದುವೆ ಬಗ್ಗೆ ಏನೇನೋ ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ. ಕೀರ್ತಿ ಮದುವೆ ಆಗುವಾಗ, ಎಲ್ಲರಿಗೂ ಹೇಳಿಯೇ ಆಗುತ್ತಾರೆ. ಸುಮ್ಮನೆ ಸುಳ್ಳುಸುದ್ದಿಗಳನ್ನು ಹಬ್ಬಿಸಬೇಡಿ’ ಎಂದು ಹೇಳಿದ್ದಾರೆ.-ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net